December 23, 2008

ಬಡವನ ಬದುಕು..


ಬಡವನಿಗೆ ಉಣ್ಣುವ ಆಸೆ,

ಉಂಡರೆ ಉಡುವ ಆಸೆ,

ಉಟ್ಟರೆ ಹೆಂಡತಿ ಆಸೆ,

ಹೆಂಡರಾದರೆ ಮಕ್ಕಳ ಆಸೆ,

ಮಕ್ಕಳಾದರೆ ಬದುಕುವ ಆಸೆ,

ಬದುಕಿದರೆ ಕೆಡುವ ಆಸೆ,

ಕೆಟ್ಟರೆ ಸಾಯುವ ಆಸೆ....

November 25, 2008

ಭಲೇ ತಾತ ಭಲೇ

ಸುಮಾರು ೩ ತಿಂಗಳ ನಂತರ ಊರಿಗೆ ಹೋಗೋಣ ಅಂತ ತೀರ್ಮಾನಿಸಿ, ಕಛೇರಿಗೆ ರಜೆ ಹಾಕಿ ಸಿದ್ದನಾಗಿ ದಿಲ್ಲಿಇಂದಿರಾ ಗಾಂದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋದೆ. ನನ್ನ ವಿಮಾನ ಸುಮಾರು ೯ ಘಂಟೆಗೆ ಹೊರಡಬೇಕಿತ್ತು. ನಾನು ತುಂಬ ಬೇಗ ವಿಮಾನ ನಿಲ್ದಾಣ ತಲುಪಿದ್ದೆ. ನನ್ನ ಬಳಿ ಸುಮಾರು ೩ ಘಂಟೆಗಳ ಸಮಯವಿತ್ತು. ಒಳಗಡೆ ಕುಳಿತು ಒಂದಷ್ಟು ಸ್ನೇಹತರಿಗೆ ದೂರವಾಣಿಯ ಮೂಲಕ ಮಾತನಾಡುತ್ತ ಒಂದಷ್ಟು ಸಮಯ ಕಳೆದೆ. ತುಂಬ ಬೇಜಾರು ಆಗ್ತಾ ಇತ್ತು. ಹಾಗೆ ಸುತ್ತಾಡುತ್ತ ಸಮಯ ಕಳೆದುಬಿಟ್ಟೆ. ಇನೊಂದು ಘಂಟೆ ಅಷ್ಟೆ ಬಾಕಿ ಇತ್ತು. ನಾನು ನನ್ನ ವಿಮಾನದ ಗೇಟ್ ಬಳಿ ಕುಳಿತು ಹಾಗೆ ಅಲ್ಲಿ ಇಲ್ಲಿ ನೋಡುತ್ತಾ ಕಾಲ ಕಳೆಯುತಿದ್ದೆ. ಅಷ್ಟರಲ್ಲಿ ಒಂದು ಸಿಹಿ ಸುದ್ದಿ ಕೇಳಿ ಬಂತು. ನಮ್ಮ ವಿಮಾನ ಸರಿಯಾದ ಸಮಯಕ್ಕೆ ಹೊರಡುವ ಸುದ್ದಿ. ಪ್ರಯಾಣಿಕರೆಲ್ಲರೂ ಸಾಲಾಗಿ ನಿಂತು ಹೊರಡುತ್ತಿದ್ದರು. ನಾನು ನಿಲ್ಲ್ಲ ಬೇಕಲ್ಲ ಎಂಬ ಸೋಮಾರಿತನದಿಂದ ಹಾಗೆ ಎದುರಲ್ಲೇ ಕುಳಿತು, ಕೊನೆಯಲ್ಲಿ ಹೋದರೈತು ಎಂದು ಹಾಗೆ ಆ ಸಾಲಿನ ಕಡೆಯಲ್ಲಿ ,ಗಮನಿಸುತ್ತಾ ಕುಲಿತಿದ್ದೆ.

ಸಾಲಿನ ಕಡೆಯಲ್ಲಿ ಇಬ್ಬರು ತಮಿಳು ದಂಪತಿಗಳು ನಿಂತಿದ್ದರು. ಅವರನ್ನು ನೋಡಿದರೆ ತಿಳಿಯುತ್ತೆ, ಇವರು ತಮಿಲಿಗರೆಂದೆ. ಹೇಗೆ ಅಂತಿರ, ಅವರದು ಒಂದಷ್ಟು ಟ್ರೇಡ್ ಮಾರ್ಕ್ ಪ್ರಪಂಚದಾದ್ಯಂತ ಪ್ರಸಿದ್ದಿ. ಅದೇನೇ ಇರ್ಲಿ, ವಿಷಯಕ್ಕೆ ಬರ್ತೀನಿ. ಈ ದಂಪತಿಗಳ ಮುಂದೆ ಇಬ್ಬರು ಕಲಿಯುಗದ ಹುಡುಗರು ನಿಂತಿದ್ದರು. ಇವರಿಬ್ಬರ ಟ್ರೇಡ್ ಮಾರ್ಕ್ ತುಂಬಾ ವಿಚಿತ್ರವಾಗಿತ್ತು. ನಮ್ಮ ಹಳ್ಳಿ ನಾಯಿಗಳು ಇವರನ್ನು ನೋಡಿದ ಕೂಡಲೇ ಕಚ್ಚುವುದು ಖಂಡಿತ. ದೊಗಳೆ ಚಡ್ಡಿ, ಕೆದಿರಿದ ಕೂದಲು, ಮುಂಗೈನ ತುಂಬಾ ಪ್ಲಾಸ್ಟಿಕ್ ಬಳೆಗಳು, ಕುತ್ತಿಗೆಯಲ್ಲಿ ಸ್ಟೀಲ್ ಚೈನ್ ಗಳು, ಹೀಗೆ ವಿಚಿತ್ರವಾದ ಉಡಿಗೆಗಳು. ನಾನು ಕೂಡ ಅಂದುಕೊಂಡೆ. ಯಾವುದೊ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡೋ ಹುಡುಗ್ರು ಅಂತ. ಇವರ ಮುಂದಿದ್ದ ಜನರೆಲ್ಲ ಮುಂದೆ ಸಾಗಿಯೇ ಬಿಟ್ರು. ಇವರಿಬ್ಬರು ಮಾತ್ರ ನಿಂತಲ್ಲೇ ನಿಂತು ಸಂಗೀತ ಪ್ರಿಯರಾಗಿ, ಮುಂದೆ ಏನು ಆಗ್ತಾ ಇದೆ ಎನ್ನುವ ಅರಿವು ಇಲ್ಲದೆ ಸಂಗೀತದಲ್ಲಿ ಮಗ್ನರಾಗಿದ್ದರು. ಪಾಪ ಇವರ ಹಿಂದಿದ್ದ ದಂಪತಿಗಳು ಮುಂದೆಯೂ ಹೋಗದೆ, ನಿಲ್ಲಲು ಆಗದೆ ಇವರಿಬ್ಬರನ್ನು ನೋಡುತ್ತಾ ನಿಂತಿದ್ದರು. ಒಂದೆರಡು ಬಾರಿ ಸುತ್ತ ಮುತ್ತ ನೋಡಿದರು. ಯಾರು ಎನನ್ನು ಹೇಳಲಿಲ್ಲ. ನಾನು ಏನು ಮಾಡುವುದೆಂದು ಯೋಚಿಸದೆ, ಎದ್ದು ಆ ಇಬ್ಬರು ಹುಡುಗರ ಮುಂದೆ ನಿಂತುಬಿಟ್ಟೆ. ಆ ಕೂಡಲೇ ಇಬ್ಬರಿಗೂ ಜ್ಞಾನೋದಯ ಆಯಿತು ಕಣ್ರೀ..ಒಂದ್ಕಡೆ ಕುಶಿ ಆಯಿತು. ಏಕೆ ಅಂದ್ರೆ ಇಬ್ಬರಿಗೂ ಸುತ್ತ ಮುತ್ತಲಿನ ಪ್ರಪಂಚದ ಅರಿವಾಗುತ್ತೆ ಅಂತ. ಕೂಡಲೇ ಒಬ್ಬ ನನ್ನ ಕೇಳಿದ. excuse me boss!!! We are in a queue? ನಾನು ಅವನಿಗೆ ಉತ್ತರ ಹೇಳಿದೆ..I know ಅಂತ.ಮತ್ತೆ ಹಿಂದಿ ನಲ್ಲಿ ಹೇಳಿದ..ಫಿರ್? ಅಂತ..ನಾನು ಇಬ್ಬರನ್ನು ನೋಡಿ..ಸುಮ್ಮನೆ ನಿಂತೇ..ಏನೋ ಗೊಣಗಿದ ನಂಗು ಅರ್ಥ ಆಗ್ಲಿಲ್ಲ..whats your problem man? ಅಂದೇ..nothing ಅಂದ..are you sure? ಅಂತ ಕೇಳಿದೆ..ಆಗ ಹೇಳ್ತಾನೆ..we are in a queue, you cannot come and stand like this..ಅಂತ..ನಾನು ಅವನಿಗೆ ಹೇಳಿದೆ...actually I was standing behind you guys..Since both of them were not moving along with the queue, I thought I should move forward..ಅಂತ I dont undersatnd what you are saying ..ಅಂದ..ಅದಿಕೆ ನಾನು This is exctly your problem ಅಂದೇ..ಅಲ್ಲಿ ತನಕ ಸುಮ್ಮನಿದ್ದ ತಮಿಳು ದಂಪತಿಗಳು ಇಂಗ್ಲಿಷ್ ನಲ್ಲಿ ಹೇಳಿದ. You are right!!! Even I am seeing this guys for a long time...ಅಂತ ನನ್ನ ಪರವಾಗಿ ಮಾತನಾಡಿದ. ನನಗೆ ಸ್ವುಲ್ಪ ಸಮಾದಾನ ಆಯಿತು. ಈ ಇಬ್ಬರು ಹುಡುಗರು ತಣ್ಣಗಾದರು..ಆಮೇಲೆ ಮಜಾ ನೋಡಿ..ಆ ಯಪ್ಪಾ ನನ್ನ ಹತ್ತಿರ ಬಂದು ಹೇಳೋದು..you did the right thing ಅಂತ..ಕುಶಿ ಆಯಿತು..ಮುಂದಿನ ಕ್ಷಣದಲ್ಲೇ ಒಂದು ಮಾತನ್ನ ಹೇಳಿದ. what you did is also wrong.you should not come and stand in between the queue ಅಂತ.ನಾನು ಹೇಳ್ದೆ. actually I should have taken you with me ಅಂತ..ಮುದುಕಪ್ಪ ಮೆಲ್ಲೆ smile ಕೊಟ್ಟ..ನಾನುನು ಅಂದುಕೊಂಡೆ..ಪಕ್ಕ ಇದಾನೆ ಮುದುಕಪ್ಪ ಅಂತಾ...

October 31, 2008

ಕುಡುಕನ ಮಾಸ್ಟರ್ ಸ್ಟ್ರೋಕ್...

ಸಾಮನ್ಯವಾಗಿ ಜನಗಳು ಎಣ್ಣೆ ಹಾಕಿ ಫುಲ್ಲು ಟೈಟಾದ ಮೇಲೆ ಏನ್ ಮಾಡ್ತಾರೆ ಅಂದ್ರೆ . ಯಾವ ಪೋಸಿಶನ್ ನಲ್ಲಿ ಎಲ್ಲಿ ಕೂತ್ಕೊಂಡ್ ಕುಡಿತ ಇರ್ತಾರೆ ಅಲ್ಲೇ ಪ್ಲಾಟ್ ಆಗ್ತಾರೆ. ಇನೊಂದ್ ಸ್ವಲ್ಪ ಜನ ನಾನೇ ರಾಜ ಅನ್ಕೊಂಡು ಯಾರು ಕೇಳಲಿ ಬಿಡಲಿ ಮಾತಿನ ಸಾಗರವನ್ನೇ ಹರಿದು ಬಿಡುತ್ತಾರೆ. ಮತ್ತೆ ಸ್ವಲ್ಪ ಜನ ಫುಲ್ಲು ಬಾವುಕರಾಗಿ ಅತ್ತಿಬಿಡ್ತಾರೆ. ಮತ್ತೊಂದ್ ಅಷ್ಟು ಜನ ಕರಾಟೆ ಆಡಿ ಪೋಲಿಸ್ ಸ್ಟೇಷನ್ಗೆ ಹೋದ್ರೆ, ಕೆಲವರು ಆಸ್ಪತ್ರೆಗೆ ಹೋಗ್ತಾರೆ. ಇದೆಲ್ಲ ಬಿಟ್ಟು ಕೆಲವರು ಇದ್ದರೆ ಅವ್ರು ಟೈಟೆ ಆಗೋಲ್ಲ. ಇದೆಲ್ಲ ಬಿಟ್ಟು ಅವ್ನು ಬೇರೆ ಏನಾದ್ರು ಮಾಡ್ತಾನೆ ಅಂದ್ರೆ ಅವನು ಮಾಸ್ಟರ್ ಪೀಸ್ ಆಗ್ತಾನೆ. ಈ ತರಹದ ಒಂದು ಮಾಸ್ಟರ್ ಪೀಸ್ ಬಗ್ಗೆ ನಾನು ಸಾಕಷ್ಟು ಹುಡುಕ್ತ ಇದ್ದೆ. ಹಿಂದೆ ಎಂದಾದರೂ ನೋಡಿರ ಬಹುದೇ ಎಂದು ನನ್ನ ಹಳೆ ನೆನಪುಗಳನ್ನ ಮೆಲುಕು ಮಾಡಿದೆ.

ಒಂದು ಘಟನೆ ನೆನಪಾಯಿತು. ರಾತ್ರಿ ಹುಡುಗ ಒಂದು ಫುಲ್ಲು ಬಾಟಲ್ ವಿಸ್ಕಿ ಯನ್ನು ಒಬ್ಬನೇ ಕೂತು, ಎದುರುಗಡೆ ಕೂತಿರುವನಿಗೆ ಮೊಳೆ ಹೊಡಿತ, ಬಾಟಲ್ ಅನ್ನು ಕಾಲಿ ಮಾಡಿ ಮಲಗಿಬಿಟ್ಟ. ಎದುರುಗಡೆ ಕೂತಿದ್ನಲ್ಲ ಅವನ ಪರಿಸ್ತಿತಿ ಏನಗಿರಬಹುದು ಒಮ್ಮೆ ನೀವು ಯೋಚನೆ ಮಾಡಿ. ಏಕೆ ಅಂದ್ರೆ ಅಂದು ಮಲಗಿದಾಗ ಸುಮಾರು ಬೆಳಗಿನ ಜಾವ ೪ ಘಂಟೆ. ಆ ಲೆವೆಲ್ನಲ್ಲಿ ಕುಡಿತಾನೆಅಂದ್ರೆ ಬೆಳಿಗ್ಗೆ ರಜೆ ಇದೆ ಅಂತಾನೆ ಅರ್ತ ಬಿಡಿ. ಅಂತು ಇಂತೂ ೪ ಘಂಟೆಗೆ ಮಲಗಿಬಿಟ್ರು. ಅರೆ ಇದೇನು ಮುಖ್ಯವಾಗಿ ಹೇಳಬೇಕಗಿರೋದನ್ನೇ ಹೇಳಲಿಲ್ಲ ಅಂತ ಯೋಚನೆ ಮಾಡ್ತಾ ಇದಿರಾ. ಸತ್ಯ ಏನು ಅಂದ್ರೆ ರಾತ್ರಿ ಆ ತರಹ ಏನು ಆಗ್ಲಿಲ್ಲ.

ಕುಡಿದವನಿಗೆ ಕಿಕ್ ಹೊಡದಿದ್ದು ಬೆಳಿಗ್ಗೆ ಎದ್ದ ಮೇಲೆ. ಬೆಳಿಗ್ಗೆ ಎದ್ದಾಗ ಸುಮಾರು ೧೧ ಘಂಟೆ. ಕಷ್ಟ ಪಟ್ಟು ಎದ್ದ ಹುಡುಗ. ಬಲಗಡೆ ಬುಜದಲ್ಲಿ ಒಂದು ಗಾಯ ಆಗಿದೆ. ಹುಡುಗ ಯೋಚನೆ ಮಾಡಿದ. ರಾತ್ರಿ ಏನ್ ಆಯಿತು ಅಂತ ಒಮ್ಮೆ ಯೋಚಿಸಿದ. ನೆನಪು ಆಯಿತು. ತಾನು ಎದುರುಗಡೆ ಕೂತವನಿಗೆ ತುಂಬ ಕೊರಿತ ಇದ್ದೆ. ಅವ್ನು ಕೂಡ ಉರಕೊಂತ ಇದ್ದ. ಅಲ್ಲಿಗೆ ಹುಡುಗ ತೀರ್ಮಾನಕ್ಕೆ ಬಂದ. ನಿಮಗೂ ಅರ್ಥ ಆಯ್ತಲ್ಲಾ ...ಕಾರಣ ಯಾರಿರಬಹುದು ಅಂತ?

ಸಿಟ್ಟು ಬಂತು ಹುಡುಗನಿಗೆ. ಅವನನ್ನ ಕರೆದು ಕೂಗಾಡಿದ. ಮಗನೆ ರಾತ್ರಿ ನಾನು ಟೈಟಾಗಿದ್ದಾಗ ನನನ್ನ ಬೀಳಿಸಿ ಗಾಯ ಮಾಡಿ ಇದ್ದೀಯ. ಸುಮ್ನೆ ಇರೋಲ್ಲ ನಾನು. ಎದುರ್ಗಡೆ ಇದ್ದವನಿಗೆ ಮತ್ತೆ ಉರ್ದೊಯ್ತು. ಅವನು ಹೇಳ್ದ, ಮಗನೆ ರಾತ್ರೆಲ್ಲ ನಿದ್ದೆ ಹಾಳ್ಮಾಡಿದ್ದೂ ಅಲ್ಲದೆ ಈಗ ನಂಗೆ ಉಗಿತ ಇದ್ದೀಯ ...ಕುಡ್ದು ಮಗನೆ ಬಚ್ಚಲು ಮನೇಲಿ ಬಿದ್ದೆ. ಜೋರು ಸೌಂಡ್ ಆಯಿತು. ಏನಪ ಅಂತ ನಾನು ಬರೋದ್ರಲ್ಲಿ ನೀನೆ ಎದ್ದು ಬರ್ತಾ ಇದ್ದೆ. ಏಳ್ತಾ ಇದಾನಲ್ಲ ಅಂತ ನಾನು ಓಪಸ್ ಬರ್ತಾ ಇದ್ದೆ ಮತ್ತೆ ಸೌಂಡ್ ಆಯಿತು...ಅದೇ ತಾರಾ ಸುಮಾರ್ ಸರಿ ಸೌಂಡ್ ಕೆಳುಸ್ತು...ಅಂತು ಮತ್ತೆ ಬಂದು ನನ್ನ ತಲೆ ತಿಂತಾ ಕುಡಿದೆ..ಈಗ ನನ್ ಮೇಲೆ ಆರೋಪ ಮಾಡ್ತಾ ಇದ್ದೀಯ. ಕಡಿಮೆ ಕುಡಿಯೋಕೆ ಆಗೋಲ್ವಾ...

ಅದ್ರು ನಮ್ಮ ಮಾಸ್ಟರ್ ಪಿಎಸೆಗೆ ಇವನ ಮೇಲೆ ನಂಬಿಕೆ ಇರ್ಲಿಲ್ಲ...ಆಮೇಲೆ ದಿನ ಕಳೆದ ಹಾಗೆ ಕೈ, ಕಾಲು ಹಾಗೆ ನೋವೋಕ್ಕೆ ಶುರು ಅದ್ವಂತೆ...ಸಾಯಂಕಾಲ ಮತ್ತೆ ಕ್ವಾರ್ಟರ್ ಹೊಡಿಬೇಕಾದ್ರೆ ಹೇಳೋದಂತೆ. ಮಗ ನೀನು ಬೆಳಿಗ್ಗೆ ಹೇಳಿದ್ದು ಸತ್ಯ ಅಂತ......

ಹೆಂಗೆ ನಮ್ಮ ಮಾಸ್ಟರ್ ಪೀಸ್ ?


ಹೀಗೊಂದು ಸತ್ಯ ದರ್ಶಿನಿ

ಆತ್ಮಿಯರೇ,
ಮಂಗಳೂರು ಅಂದಕೂಡಲೇ ಮನಸ್ಸಿಗೆ ತಟ್ಟನೆ ನೆನಪಾಗುವ ಗಟನೆ ಅಂದ್ರೆ ಇತ್ತೀಚೆಗಷ್ಟೇ ಚರ್ಚ್ಗಳ ಮೇಲೆ ಬಜರಂಗದಳದವರು ನಡೆಸಿದ ಹಲ್ಲೆ. ನಾನು ಇಲ್ಲಿ ನನ್ನ ದಿಲ್ಲಿ ಸ್ನೇಹಿತರೊಂದಿಗೆ ಈ ವಿಚಾರ ಬಂದಾಗಲೆಲ್ಲ ನನ್ನ ಮನಸ್ಸಿಗೆ ತುಂಬ ಮುಜುಗುರವಾದ ಒಂದು ಬಾವನೆ. ಎಲ್ಲ ಸುದ್ದಿ ಮಾಧ್ಯಮಗಳಲ್ಲಿ ಇದೆ ಸುದ್ದಿ. ಮಂಗಳೂರಿನಿಂದ ಪ್ರಾರಂಬವಾಗಿ ದಿಲ್ಲಿ ತಲುಪಿ ಅಲ್ಲಿಂದ ನಮ್ಮ ಪ್ರದಾನ ಮಂತ್ರಿಗಳ ಜೊತೆಗೆ ಅಮೆರಿಕಾಗು ಹೋಗಿ ಬಂತು. ನಮ್ಮ ಪ್ರದಾನ ಮಂತ್ರಿಗಳು ಕೂಡ ತುಂಬ ನೊಂದು ಕೊಂಡು "ದಿಸ್ ಇನ್ಸಿಡೆಂಟ್ ಹಾಸ್ ಪುಟ್ ಇಂಡಿಯಾ ಇನ್ ಟು ವೆರಿ ಹ್ಯುಮಿಲಿಯೇಟಿಂಗ್ ಪೋಸಿಶನ್ " ಅಂತ ಮಾದ್ಯಮದ ಮೂಲಕ ತಮ್ಮ ಕೋಪವನ್ನು ಕರ್ನಾಟಕ ಸರ್ಕಾರದವರಿಗೆ ರವಾನೆ ಮಾಡ್ಬಿಟ್ರು. ಸರ್ಕಾರದವರು ಸಿಂಗ್ ಸಹೆಬ್ರುನಾ ಸಮಾದಾನ ಮಾಡುವ ಪ್ರಯತ್ನದಲ್ಲಿ ಬಜರಂಗ ದಳದ ನಾಯಕ ಮಹೇಂದ್ರ ಕುಮಾರನನ್ನು ಬಂಧಿಸಿಯೇ ಬಿಟ್ರು. ಅಲ್ಲಿಗೆ ಸುದ್ದಿಗಳು ಸಮಾಪ್ತ. ಸುದ್ದಿ ಅಷ್ಟೆ ಮುಗೀತು...ಕತೆ ತುಂಬಾನೆ ಬಾಕಿ ಇದೆ. ಓದಿ......

ನಾನು ಮೊದಲು ಈ ಘಟನೆ ಕೇಳ್ದಾಗ ಈ ಬಜರಂಗ ದಳದವರಿಗೆ ಇನ್ನೇನು ಕೆಲಸ ಇಲ್ವಾ? ಇವರ ಹಣೆಬರಹನೆ ಇಷ್ಟು ಅಂತ ರೆಗ್ತಾ ಇದ್ದೆ. ಆದ್ರೆ ಒಂದು ಪ್ರಶ್ನೆ ಮನಸ್ಸಿಗೆ ಬಂತು. ಮಂಗಳೂರಿನಲ್ಲೇ ಮೊದಲು ಏಕೆ ಪ್ರಾರಂಬ ಆಯಿತು? ಸುಮ್ಸುಮ್ನೆ ಇವರು ಚರ್ಚ್ಗಳ ಮೇಲೆ ಏಕೆ ದಾಳಿ ಮಾಡಿದ್ರು ಅಂತ? ಹುಚ್ಚರು ಒಟ್ಟಿಗೆ ಸೇರಿದ್ದಾರೆ ಅಂತ. ಹೀಗೆ ಮಾಧ್ಯಮಗಳನ್ನು ಗಮನಿಸುತ್ತಾ ಇದ್ದೆ. ಡೆಕ್ಕನ್ ಹೆರಾಲ್ಡ್ ಮತ್ತು ಮುಂಬೈ ಮಿರರ್ ಎಂಬ ದಿನ ಪತ್ರಿಕೆಗಳಲ್ಲಿ ಒಂದು ಲೇಖನ ಬಂತು. ಅದರ ಕೊಂಡಿಯು ಇಲ್ಲಿದೆ ನೋಡಿ.
http://www.mumbaimirror.com/net/mmpaper.aspx?page=article&sectid=3&contentid=200809192008091903361675194568d35&pageno=1


ಈ ಲೇಖನಗಳ ಪ್ರಕಾರ ಈ ಎಲ್ಲ ಗಲಬೆಗಳಿಗೆ ಕಾರಣ ಸತ್ಯ ದರ್ಶನ ಎಂಬ ಒಂದು ಪುಸ್ತಕ. ಈ ಪುಸ್ತಕ ದಲ್ಲಿ ಇರುವುದಾದರೂ ಏನು? ಕೆಲವು ಆಯ್ದ ಭಾಗಗಳನ್ನು ನಾನು ಇಲ್ಲಿ ಉಲ್ಲೆಕಿಸುತ್ತಿದ್ದೇನೆ.
೧. ಊರ್ವಶಿ - ಭಾಗವಾನ್ ಶ್ರೀ ವಿಷ್ಣುವಿನ ಮಗಳು - ಇವಳು ದೇವದಾಸಿ - ವಶಿಷ್ಟ ಈ ದೇವದಾಸಿಯ ಮಗ - ಇವನು ತನ್ನ ತಾಯಿಯನ್ನೇ ವದಿಸುತ್ತಾನೆ - ಇಂತಹ ನೀಚ ಮನುಷ್ಯ ಹಿಂದೂಗಳ ಭಗವಂತ ರಾಮನ ಗುರು.
೨. ಇಂತಹವರನ್ನು ದೇವರು ಎಂದು ಹೇಳುವುದೇ ಒಂದು ದೊಡ್ಡ ತಮಾಷೆ.
ಹೀಗೆ ಹಲವಾರು ರೀತಿಯಲ್ಲಿ ಹಿಂದೂ ದೇವರುಗಳ ವಿಶ್ಲೇಷಣೆ ಮಾಡುತ್ತ ಹೊರಡುತ್ತಾನೆ. ನಾನು ಇಂತಹ ಮಹಾನುಭಾವ ಯಾರೆಂದು ತಿಳಿಯುವ ಕುತೂಹಲ. ಅವನ ಹೆಸರು ಪರವಸ್ತು ಸೂರ್ಯನಾರಾಯಣ. ಇವನ ಬಗ್ಗೆ ಹೇಳೋದು ತುಂಬ ಇದೆ.

ಇವನೇನೋ ಬರೆದ ಸರಿ. ನಂತರ ಏನಾಯ್ತು. ೧೯೯೬ ರಲ್ಲಿ ಬಿಡುಗಡೆಯಾದ ಈ ಪುಸ್ತಕವನ್ನು ಆಂದ್ರ ಪ್ರದೇಶದಲ್ಲಿ ಕೆಲವೊಂದು ಚುರ್ಚುಗಳು ಜನರ ಮುಂದೆ ಈ ಪುಸ್ತಕವನ್ನು ತಂದಿಡುವ ಸಾಹಸ ಪ್ರಯತ್ನ ಮಾಡಿದರು. ಅಂದ್ರ ಸರ್ಕಾರದವರು ಅಂದೇ ಈ ಪುಸ್ತಕವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದರು. ಅದೇನೋ ಸರಿ, ಆದ್ರೆ ಮಂಗಳೂರಿನಲ್ಲಿ ಗಲಾಟೆ ಏಕೆ ಶುರುವಾಯ್ತು? ಹಾಗೆ ಯೋಚಿಸಿ...ಮಂಗಳೂರಿನ ಚುರ್ಚುಗಳು ಮತ್ತೊಮ್ಮೆ ದುಸ್ಸಾಹಸ ಮಾಡುವ ಪ್ರಯತ್ನ. ಇದೆ ಪುಸ್ತಕವನ್ನು ತೆಲಗಿನಿಂದ ಕನ್ನಡಕ್ಕೆ ಅನುವಾದ ಮಾಡಿ ಜನರಿಗೆ ತಲುಪಿಸಲು ಮಾಡಿದ ಹೀನ ಕೃತ್ಯ. ಉತ್ತರ ಅವರಿಗೆ ತುಂಬ ಬೇಗ ಹಾಗು ಸಾಕಷ್ಟು ಚುರುಕಾಗಿಯೇ ಸಿಕ್ತು. ಇದೆಲ್ಲ ಆದ ನಂತರ ಮಾಧ್ಯಮಗಳಲ್ಲಿ ಬಂದ ಸುದ್ದಿ ಎಲ್ಲರಿಗೂ ಗೊತ್ತು.

ನಾನು ಹೀಗೆ ಬರೆಯೋದು ಬಜರಂಗ ದಳದವರಿಗೆ ಕೊಡುವ ಬೆಂಬಲ ಅಂತು ಅಲ್ಲ. ಹಾಗಂತ ಕೆಲವು ಚುರ್ಚುಗಳು ಮಾಡ್ತಿರೋದು ಕೂಡ ಸರಿ ಅಲ್ಲ. ನನ್ನ ಎಲ್ಲ ಆತ್ಮೀಯರಿಗೆ ತಿಳಿದ ಹಾಗೆ ನಾನು ಬಜರಂಗ ದಳದವರನ್ನು ಹಲವಾರು ಬಾರಿ ಕಂಡಿಸಿರುವುದು ಇದೆ. ಇವರುಗಳು ಚುರ್ಚುಗಳಿಗೆ ನುಗ್ಗಿ ಹಲ್ಲೆ ನಡೆಸಿದರು. ಹಾಗೆ ನೋಡಿದರೆ ಬಜರಂಗದಳ, ಪುಸ್ತಕ ವನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ ಚುರ್ಚುಗಳು ಮತ್ತು ನೀಚಾತ್ಮ ಪರವಸ್ತು ಸೂರ್ಯನಾರಾಯಣ ಎಲ್ಲರೂ ಒಂದೇ ಜಾತಿಗೆ ಸೇರಿದ, ಸಮಾಜದಲ್ಲಿರುವ ಸೊಳ್ಳೆಗಳು.

ಇಲ್ಲಿ ಎಷ್ಟೊಂದು ತಪ್ಪುಗಳು ನೆಡೆದು ಹೋಗಿದೆ ನೋಡಿ.
೧. ಯಾರೋ ನೀಚಾತ್ಮ ತಲೆ ಕೆಟ್ಟಿ ಏನೋ ಬರೆದ.
೨. ಈ ಹುಚ್ಚನ ಮಾತು ಕೇಳಿ ಕೆಲವು ಚುರ್ಚುಗಳು ಚಪ್ಪಾಳೆ ಹಾಕಿದರು.
೩. ಎಲ್ಲ ಹುಚ್ಚರಿಗೂ ನಾವು ಸರಿ ಮಾಡುತ್ತೇವೆಂದು ಬಜರಂಗ ದಳದವರು ಹುಚ್ಚರಾದರು.
ಯಂತಹ ತಮಾಷೆ ನೋಡಿ. ಕೋತಿಗೆ ಹೆಂಡ ಕುಡಿಸಿದ ಹಾಗೆ. ಆದರೆ ಇವೆಲ್ಲ ನೀಚ ಕೃತ್ಯಗಳು ತಂದಿಟ್ಟ ಕಳಂಕ ವೆಂದರೆ ಹಿಂದೂ - ಕ್ರಿಶ್ಚನ್ ಗಲಾಟೆಎನ್ನುವ ವಿಷ ನಮ್ಮ ಸಮಾಜದಲ್ಲಿ ನೆಲೆ ಮಾಡಿತು . ನನ್ನ ಪ್ರಕಾರ ಮೇಲೆ ನಮೂದಿಸಿರುವ ಮೂರು ಹುಚ್ಚರ ಪೈಕಿಯಲ್ಲಿ ಮೊದಲೆರೆಡು ಹುಚ್ಚರು ತಣ್ಣಗಾದರೆ ಮೂರನೆಯ ಕೋತಿ ಕುಣಿಯುವುದನ್ನು ತಾನಾಗೆ ನಿಲ್ಲಿಸುವದು ಎಂದು ನಂಬಿರುತ್ತೇನೆ.

ಕರ್ನಾಟಕ ೨೦ -೨೦ ಲೀಗ್

ಅದು ಯಾಕೋ ಏನೋ ಗೊತ್ತಿಲ್ಲ. ರವಿ ಬೆಳಗರೆ ಅವರಿಗೆ ದೇವೇಗೌಡರ ನೆನಪು ಅಗಾಗ ಆಗ್ತಾ ಇರುತ್ತೆ. ಮೊನ್ನೆ ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಎಂದು ಮರೆಯದ ಹಾಡು ಕಾರ್ಯಕ್ರಮದಲ್ಲಿ ಶ್ರೀ ಬೆಳಗೆರೆ ಅವರಿಗೆ ಗೌಡರ ನೆನಪು ಅಗಾಗ ಆಗ್ತಾ ಇತ್ತು. ಬಹುಷಃ ಇವರಿಬ್ಬರು ಪದ್ಮನಾಭನಗರದ ನಿವಾಸಿಗಳು ಆಗಿರೋದ್ರಿಂದ. ಹೇಗೆ ಅಂದ್ರೆ ನಮ್ಮ ಪಕ್ಕದ ಮನೆಯಲ್ಲಿ ಯಾರಾದ್ರೂ ಒಳ್ಳೆ ಫಿಗರ್ ಇದ್ರೆ ನಮಗೆ ನೆನಪಾಗುತ್ತೆ ನೋಡಿ, ಹಾಗೆ. ಎಲ್ಲೊ ಒಂದು ಕಡೆ ಪ್ರೀತಿ. ಅದೇನೇ ಇರಲಿ. ಈ ರೀತಿ ಬೆಳಗರೆ ಅವರಿಗೆ ಗೌಡರ ನೆನಪಾದ ಒಂದು ಪ್ರಸಂಗವನ್ನ ನಾನು ಈಗಾಗಲೇ ನಿಮಗೆ ಹೇಳಿದ್ದೇನೆ. ಹಾಗೆ ಅದೇ ರೀತಿಯ ಇನ್ನೊಂದು ಪ್ರಸ್ನಗವನ್ನ ಇಲ್ಲಿ ಹೇಳ್ಬೇಕು. ಈ ಬಾರಿ ಬೆಳಗೆರೆ ಅವರು ಕ್ರಿಕೆಟ್ ಮತ್ತು ರಾಜಕೀಯವನ್ನ ಹೋಲಿಕೆ ಮಾಡ್ಲಿಕ್ಕೆ ಹೊರಟುಬಿಡ್ತಾರೆ. ಅದ್ಬುತವಾದ ವಾಕ್ಚತುರತೆ ಬೆಳಗರೆ ಅವರಿಗೆ ದೇವರು ಕೊಟ್ಟ ವರ ಬಿಡಿ. ಇಲ್ಲಿ ಇನ್ನು ಒಂದು ಮಾತಿದೆ. ಸರಿಯಾಗಿ ಎಣ್ಣೆ ಏರ್ಸವ್ರೆಲ್ಲ ಮಸ್ತಾಗೆ ಮಾತನಾಡ್ತಾರೆ ಅಂತ. ಆದ್ರೆ ನಮ್ಮ್ ಬೆಳಗರೆ ಅವರು ಯಾವಾಗ ಮಾತು ಕಲಿತರು ಅಂತ ಅವರನ್ನೇ ಕೇಳಿ ತಿಳ್ಕೊಬೇಕು. ಅದೇನೇ ಇದ್ರೂ ಬೆಳಗರೆ ಸಾಹೇಬರ ನಿರೂಪಣೆ ಅಂತು ಕೇಳುಗರಿಗೆ ರಸದೌತಣ. ಹೀಗೆ ನಿರೂಪಣೆ ಮಾಡ್ತಾ ಬೆಳಗರೆ ಸಾಹೇಬ್ರು ನಮ್ಮ ಕರ್ನಾಟಕದ ರಾಜಕೀಯದಲ್ಲಿ ನಡೆಯಲಿರುವ ಒಂದು ೨೦ - ೨೦ ಲೀಗ್ ಬಗ್ಗೆ ಹೇಳಿದ್ರು. ನಮ್ಮ ಎಲ್ರುಗೂ ಗೊತ್ತು. ಕುಮಾರಸ್ವಾಮಿ ಅವರು ಅಧಿಕಾರದ ಅವದಿಯಲ್ಲಿ ಎಷ್ಟು ಚುರುಕಾಗಿ ಸರ್ಕಾರಿ ಕೆಲಸಗಳು ಸಾಗ್ತಾ ಇದ್ವು. ಮಜಾ ಅಂದ್ರೆ ಅಷ್ಟೆ ಚುರುಕಾಗಿ ಕುಮಾರಸ್ವಾಮಿ ಅವ್ರು ಕೂಡ ಹೋಗ್ಬಿಟ್ರು. ಈಗ ನೋಡಿ ಯಡಿಯೂರಪ್ಪ ನವರು ಮಂದಗತಿಯಲ್ಲಿ ಸಾಗ್ತಾ ಇದ್ದಾರೆ. ಇದನ್ನ ಗಮನಿಸಿದ ಕುಮಾರಣ್ಣ ಹೀಗೆ ಒಂದು ದೂರವಾಣಿನ ಮಾಡಿದರಂತೆ ಯಡಿಯೂರು ಸಾಹೆಬ್ರುಗೆ. ನಿಮಗೊಂದು ಸವಾಲಿದೆ, ಬೇಟಿ ಮಾಡಿ ಹೇಳ್ತೀನಿ ಅಂದ್ರಂತೆ. ಇನ್ನು ಯಡ್ಡಿ ಸಾಹೆಬ್ರುನ ಕೇಳ್ಬೇಕಾ. ಬಂದೆ ಈಗಲೇ ಅಂತ ಬೇಟಿ ಮಾಡೇ ಬಿಟ್ರಂತೆ. ಅದೇನು ನಿಮ್ಮ ಸವಾಲು ಹೇಳಪ್ಪ ಅಂದ್ರಂತೆ. ಕುಮಾರಣ್ಣ ಆದಿಕೆ ಹಿಂದೆ ನೆಡೆದ ೨೦ -೨೦ ನಲ್ಲಿ ನಿಮಗೆ ಬ್ಯಾಟ್ಟಿಂಗ್ ಕೊಡ್ಲಿಲ್ಲ. ಈ ಸಾರಿ ಬ್ಯಾಟ್ಟಿಂಗ್ ಕೊಟ್ಟೆ ಕೊಡ್ತೀವಿ. ದಮ್ಮಿದ್ರೆ ಬನ್ರಿ ಒಂದು ೨೦ -೨೦ ಆಡೋಣ ಅಂದ್ರಂತೆ. ಯಡ್ಡಿ ಈಗ ಸಿ.ಎಂ. ಸವಾಲನ್ನ ಸ್ವೀಕಾರ ಮಾಡ್ದೆ ಇರ್ತಾರ. ಕುಮಾರಣ್ಣ ಈಗ ಸೋತು ಸುಣ್ಣ ಆಗಿದಾರೆ. ಯಡ್ಡಿ ಮನಸಲ್ಲೇ ಅಂದ್ಕೊಂಡ್ರಂತೆ. ಸೋತರು ಈ ನನ್ ಮಗುನ್ ಜಂಬಕ್ಕೆನು ಕಡಮೆ ಇಲ್ಲ ಅಂತ. ನಾನು ರೆಡಿ ನೀನು ನಿನ್ನ ತಯಾರಿ ಮಾಡ್ಕೊಂಡು ಬಾ ಕುಮಾರ, ಅಂದೇ ಬಿಟ್ರು. ನಂತರ ಯಡ್ಡಿ ಸಾಹೇಬ್ರು ಸ್ವುಲ್ಪ ಯೋಚನೆ ಮಾಡಿ ನಂದೊಂದು ಕಂಡೀಷನ್ ಇದೆ ಅಂದ್ರಂತೆ. ಕುಮಾರಣ್ಣ ಅದೇನಿದೆ ನಿಮ್ ಕಂಡೀಷನ್ ಹೇಳ್ಬಿಡಿ ಅಂತಾರೆ. ಆದಿಕೆ ಯಡ್ಡಿ ಸಾಹೇಬ್ರು ಬ್ಯಾಟ್ಟಿಂಗ್ ಮಾತ್ರ ನಾವೇ ಫರ್ಸ್ಟ್ ಮಾಡಬೇಕು ಅಂದ್ರಂತೆ. ಕುಮಾರಣ್ಣ ಯೋಚನೇನೆ ಮಾಡ್ದೆ ಓಕೆ ಅಂದ್ಬಿಟ್ರು. ಯಡ್ಡಿ ಫುಲ್ ಕುಶ್. ಹಾಗಾದ್ರೆ ನಾನ್ ರೆಡಿ ಅಂತ ಹೇಳ್ಬಿತ್ರು. ಆಮೇಲೆ ಕುಮಾರಣ್ಣ ನೀವು ಮಾತ್ರ ಕಂಡೀಷನ್ ಹಾಕಿದರೆ ಹೇಗೆ, ನನ್ದುನು ಒಂದು ಕಂಡೀಷನ್ ಇದೆ ಅಂದ್ರಂತೆ. ಯಡ್ಡಿ ಸಾಹೇಬರು ಹೇಗಿದ್ರು ಬ್ಯಾಟ್ಟಿಂಗ್ ನಂದೆ ಮೊದಲು ಅದೇನು ಹೇಳ್ರಿ ಅಂದ್ರಂತೆ. ಆದಿಕೆ ಕುಮಾರಣ್ಣ, ಅಂಪೈರ್ ಮಾತ್ರ ನಮಪ್ಪಾನೆ ಆಗಬೇಕು ಅಂದ್ರಂತೆ.
ಯಡ್ಡಿ ಫುಲ್ಲು ತಲೆ ಕೆಟ್ಟು ಈ ಅಪ್ಪ ಮಕ್ಳು ಸಹವಾಸ ಲೈಫ್ ನಲ್ಲಿ ಬೇಡ ಅಂತ ಅನ್ಕೊಂಡು, ಕುಮಾರಣ್ಣ ನಿಂಗು ನಿಮಪ್ಪನಿಗು ದೊಡ್ ನಮಸ್ಕಾರ ಅಂದ್ಬಿಟ್ಟು ಸೀದಾ ರೈಟ್ ಅಂದ್ರಂತೆ.

October 30, 2008

ಹೋಯ್ತು ಒಂಟಿ ಬಂತು ಜಂಟಿ

ಕರ್ನಾಟಕದಲ್ಲಿ ಸಾರಾಯಿ ನಿಷೇಧ ಮಾಡಿದಾಗ ತುಂಬ ಜನರು ಯೋಚಿಸುತಿದ್ದರು. ಸಾರಾಯಿ ಕುಡುಕರು ಈಗ ಏನು ಮಾಡುವರೆಂದು? ನಾನು ನಮ್ಮ ಹಳ್ಳಿನಲ್ಲಿ ಹೀಗೆ ಒಬ್ಬನ್ನ ಕೇಳ್ದೆ. ಸಾರಾಯಿ ಇನ್ನು ಸಿಗೋದಿಲ್ಲ. ಬಾಟಲ್ ಮಧ್ಯಕ್ಕೆ ದುಡ್ಡು ಜಾಸ್ತಿ. ಮುಂದೆ ಏನು ಮಾಡ್ತಿರ ನೀವುಗಳು ಅಂತ. ಪಟ್ ಅಂತ ಉತ್ತರ ಬಂತು.

ಆಗ ೧೦ ರೂಪಾಯಿ ಕೊಟ್ರೆ ಒಂದು ಪ್ಯಾಕೆಟ್ ಸಿಗೋದು.
ಎಅಗ ೨೦ ರುಪಾಯಿ ಕೊಟ್ರೆ ಒಂದು ಬಾಟಲ್ ಸಿಕುತ್ತೆ.
ಆಗ ಒಂಟಿ ಯಾಗಿ ಹೋಗ್ತಿದ್ದೆ.
ಈಗ ಜಂಟಿಯಾಗಿ ಹೋಗ್ತಿವಿ.

ಆಗ ನಂಗೆ ಅನ್ನುಸ್ತು . ಟೀಮ್ ವರ್ಕ್ ಏನೆಲ್ಲ ಮಾಡುತ್ತೆ ಅಂತ. ಪೀಪಲ್ ಅರ್ ಇನ್ನೋವೆಟಿವ್ ....

October 29, 2008

ಬಿಹಾರಿನ ರಾಹುಲ್ ರಾಜ್ ...

ಮೊನ್ನೆಯಷ್ಟೇ ಮುಂಬೈ ನಗರದಲ್ಲಿ ನೆಡೆದ ಎನ್ಕೌಂಟರ್ನಲ್ಲಿ ಬಿಹಾರಿನ ರಾಹುಲ್ ರಾಜ್ ಎಂಬ ಯುವಕ ಹತ್ಯೆಗೆ ಒಳಗಾದನು. ನಂತರ ನೆಡೆದ ಬೆಳವಣಿಗೆಗಳನ್ನು ನಾವು ಗಂಭಿರವಾಗಿ ಗಮನಿಸುವ ಅವಶ್ಯಕತೆ ಇದೆ ಎಂಬುದು ಇಲ್ಲಿ ನಾನು ಹೇಳಲು ಪ್ರಯತ್ನಿಸುತ್ತಿರುವ ವಿಚಾರ. ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳು, ರಾಜಕೀಯ ಮುಖಂಡರ ಹೇಳಿಕೆಗಳು, ಅದಿಕಾರಿಗಳ ಸಮರ್ತನೆ, ಇವೆಲ್ಲವನ್ನೂ ನಾವು ಕೇಳಿದ್ದೇವೆ. ಬಿಹಾರಿನ ನಾಯಕರು ಶ್ರೀ ಲಾಲು ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಅವರು ಬಿಹಾರಿನ ಕಂದನನ್ನು ಮುಂಬೈ ಪೊಲೀಸರು ಕೊಂದರು, ಅದು ಎನ್ಕೌಂಟರ್ ಅಲ್ಲ ಎಂದು ವಾದಿಸಿದರು. ಈ ಇಬ್ಬರು ನಾಯಕರು ಇದೆ ಮೊದಲ ಬಾರಿಗೆ ಒಗ್ಗಟ್ಟಾಗಿ ಬಿಟ್ಟರು. ಎಂತಹ ಆಶ್ಚರ್ಯ ನೋಡಿ. ಕೆಲವು ತಿಂಗಳ ಹಿಂದೆ ಬಿಹಾರಿನಲ್ಲಿ ನೆಡೆದ ಅತಿವೃಷ್ಟಿಯಲ್ಲಿ ಸಾವಿರಾರು ಜನಗಳು ಮನೆ, ಆಸ್ತಿ , ದನ ಕರು ಹಾಗು ತಮ್ಮೆ ಕುಟುಂಬದವರನ್ನು ಕಳೆದುಕೊಂಡರು. ಅಂತಹ ಸಂದರ್ಭದಲ್ಲಿ ಇದೆ ಇಬ್ಬರು ನಾಯಕರು ಒಬ್ಬರನೊಬ್ಬರು ದೂರಿದರು. ಆಗ ಇಬ್ಬರು ಒಂದಾಗಿ ಕೆಲಸ ಮಾಡಿದರೆ ಸಮಸ್ಯೆಯನ್ನು ಸಾಕಷ್ಟು ಚೆನ್ನಾಗಿ ನಿಬೈಸಬಹುದಿತ್ತು. ಸಾವಿರಾರು ಜನರು ಸತ್ತಾಗ ಇಲ್ಲದ ಒಗ್ಗಟ್ಟು ಈಗ ಒಬ್ಬನ ಎನ್ಕೌಂಟರ್ನಿಂದಾಗಿ ಬಂದಿದೆ ಎಂದರೆ ....ಏನೆಂದು ತಾನೆ ಹೇಳಲು ಸಾದ್ಯ. ...

ಮಾದ್ಯಮದವರು ಈ ಘಟನೆ ಯನ್ನು ಪ್ರಶ್ನಿಸಿದರು. ಬೇರೆ ದಾರಿಯೇ ಇರಲಿಲ್ಲವೇ ಅರಕ್ಷಕರಿಗೆ ? ಹೀಗೆ ಸಾಕಷ್ಟು ಪ್ರಶ್ನೆಗಳು ಕೇಳಿ ಬಂದವು. ನಾವು ನಮ್ಮ ಮಾದ್ಯಮದವರನ್ನು ಸಾಕಷ್ಟು ಬಾರಿ ತುಂಬ ಜವಾಬ್ದಾರಿ ಇಂದ ವರ್ತಿಸಿರುವುದನ್ನು ಗಮನಿಸಿರುವುದು ಸತ್ಯ. ಹಾಗಾಗಿ ಇವರು ಕೇಳುವ ಪ್ರಶ್ನೆಯಲ್ಲಿ ಸತ್ವ ಇರಬಹುದು. ಅದೇನೇ ಇರಲಿ ಅದಿಕಾರಿಗಳು ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ.

ಇಲ್ಲಿ ಗಮನಿಸಬೇಕಾದ ಒಂದು ಅಂಶ ಎಂದರೆ ಒಬ್ಬ ಮಾಮೂಲಿ ಪ್ರಜೆಗೆ ಪಿಸ್ತೂಲು ಎಲ್ಲಿಂದ ಬಂತು. ಹಾಗೆ ಬಿಹಾರಿನಲ್ಲಿ ಪಿಸ್ತೂಲು ಹಿಡಿದು ಜನರನ್ನು ಹೆದರಿಸುವ ವರ್ತನೆ , ಅವರಿಗೆ ತಪ್ಪು ಅಂತ ಏಕೆ ಅನಿಸಲಿಲ್ಲ. ಹೀಗೆ ಇನ್ನು ಎಷ್ಟು ಜನರು ಬಿಹಾರಿನಲ್ಲಿ ಪಿಸ್ತೂಲು ಹಿಡಿದು ಈ ಮೂರ್ಖ ಕೃತ್ಯ ಎಸಗುವ ಯೋಚನೆ ನಡೆಸಿದ್ದಾರೆ? ನಾನು ಇಲ್ಲಿ ಮುಂಬೈಕರ್ ಮತ್ತು ಬಿಹಾರಿಗಳ ಮದ್ಯೆ ಇರುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ಅದು ನಮಗೆ ಅರ್ಥವಾಗದ ವಿಚಾರ. ಅರ್ಥವಾದರೂ ಆದಷ್ಟು ಬೇಗ ಮರೆಯಬೇಕು ಎನ್ನುವ ಬಯಕೆ.

ನಮ್ಮ ಭಯ ವೆಂದರೆ ಮುಗ್ದ ಜನರು ಇಂತಹ ಮೂರ್ಖರಿಗೆ ಬಲಿಯಾಗುವ ಸಾದ್ಯತೆ ಇದ್ದೆ ಇದೆ. ಹಾಗಾಗಿ ಈ ಪ್ರಶ್ನೆ ಕೇಳಲೇ ಬೇಕು. ಬಿಹಾರಿನವನು ಒಬ್ಬ ಸತ್ತ ಎಂಬುದು ಸತ್ಯ. ಆದರೆ ಅವನು ಮಡಿದ ಕೃತ್ಯ ಹಿಡಿ ದೇಶಕ್ಕೆ ನಾಚಿಕೆ ತರುವಂತದ್ದು. ಇವನು ಮಾಡಿದ ಕೆಲಸ ಸರಿ ಎಂದರೆ ನಾಳೆ ಒಬ್ಬ ಮುಂಬೈ ನಿಂದ ಒಂದು ಪಿಸ್ತೂಲು ಹಿಡಿದು ಪಾಟ್ನಾಗೆ ಹೋಗಿ ಲಾಲು ನನ್ನು ಕೊಲೆ ಮಾಡಲು ಬಂದೆ ಎಂದರೆ ಆಶ್ಚರ್ಯ ಏನಿಲ್ಲ ..ಅವನನ್ನು ಮುಂಬೈ ಪ್ರೇಮಿ ಇವನನ್ನು ಬಿಹಾರಿನ ಪ್ರೇಮಿ ಎಂದು ಈ ನಾಯಕರು ನಾಮಕರಣ ಮಾಡಿದರೆ ತಪ್ಪು ಆಗಲಾರದು.

ಸ್ನೇಹಿತರೇ, ಈಗಾಗಲೇ ಈ ಘಟನೆಯ ಬಗ್ಗೆ ಒಂದು ವಿಚಾರಣೆ ಸಾಗುತ್ತಿದೆ. ಎಲ್ಲ ಪ್ರಶ್ನೆ ಗಳಿಗೆ ಉತ್ತರ ಸಿಗಬಹುದು. ನಮ್ಮ ನಾಯಕರಲ್ಲಿ ನಾನು ಕೇಳುತ್ತಿರುವ ಪ್ರಶ್ನೆ ಇಷ್ಟೇ. ಒಬ್ಬ ಸಾಮಾನ್ಯ ಪ್ರಜೆಗೆ ಒಂದು ರಾಜ್ಯದ ರಾಜದಾನಿಯಲ್ಲಿ ಪಿಸ್ತೂಲು ಸಿಗುತ್ತೆ ಎಂದರೆ, ಇದು ಭಯ ಹುಟ್ಟಿಸುವ ಸುದ್ದಿ. ಇದರ ಬಗ್ಗೆ ಸಂಬಂದ ಪಟ್ಟ ಅದಿಕಾರಿಗಳು, ರಾಜಕೀಯ ನಾಯಕರು ಯೋಚಿಸಿ ಕಾರ್ಯೋನ್ಮುಖರಾದರೆ ಸಾಮನ್ಯ ಜನರ ಬಾಳು ನೆಮ್ಮದಿ ಯಾಗಿರಿವುದು...

ಇಬ್ಬರು ಕನ್ನಡಿಗರು ಸೇರಿದರೆ....

ಸ್ನೇಹಿತರೇ,
ಮೊನ್ನೆ ೨೮ನೇ ತಾರೀಖು ಈಟಿವಿ ಕನ್ನಡ ವಾಹಿನಿಯಲ್ಲಿ ನಮೆಲ್ಲರ ಆತ್ಮಿಯ ನಟ ದಿವಂಗತ ಶಂಕರ್ ನಾಗ್ ಅವರ ಜ್ಞಾಪಕಾರ್ಥವಾಗಿ, ರವಿ ಬೆಳಗರೆ ಅವರ ನಿರೂಪಣೆಯೊಂದಿಗೆ ಶಂಕರ್ ನಾಗ್ ಅವರು ನಟಿಸಿದ ಚಿತ್ರಗಳ ಹಾಡನ್ನು ಹಾಡುವ ಕಾರ್ಯಕ್ರಮ ಮೂಡಿ ಬಂತು. ಆ ಕಾರ್ಯಕ್ರಮದ ಹೆಸರೇ "ಎಂದು ಮರೆಯದ ಹಾಡು". ಶಂಕರ್ ನಾಗ್ ಅವರು ಅಂದ್ರೆ ನಮೆಲ್ಲರ ಜೀವನದಲ್ಲಿ ಮಿಂಚಿನ ವೇಗದಲ್ಲಿ ಬಂದು ಹೋದ ಅಪ್ರತಿಮ ಕನ್ನಡದ ಕಲಾವಿದ. ಹಾಗಾಗಿ ಕಾರ್ಯಕ್ರಮ ನೋಡಲೇಬೇಕು ಎಂದು ತಿರ್ಮಾನಿಸಿ ನೋಡಲು ಕುಳಿತೆ. ಜೊತೆಗೆ ರವಿ ಬೆಳಗೆರೆ ಅವರ ನಿರೂಪಣೆ ಅಂದ್ರೆ ಅದರ ಮಜಾನೆ ಬೇರೆ ಬಿಡಿ. ಹೀಗೆ ರವಿ ಬೆಳೆಗರೇ ಅವರು ನಿರೂಪಣೆ ಮಾಡ್ತಾ ಒಂದು ಮಾತು ಹೇಳಿದ್ರು ಕಣ್ರೀ.. ಅದನ್ನ ಕೇಳಿದ ಮೇಲೆ ಅದ್ರಲ್ಲಿ ಎಷ್ಟು ಸತ್ಯ ಇದೆ ಅಂತ ನಾನು ಒಮ್ಮೆ ಯೋಚನೆ ಮಾಡಿದೆ. ಹಾಗಂತ ಅವರೇನು ಅಷ್ಟು ಗಂಬೀರವದ ವಿಚಾರವನ್ನ ಹೇಳಲಿಲ್ಲ. ಅದನ್ನು ಕೇಳ್ದಾಗ ನಂಗು ತುಂಬ ನಗು ಬಂತು. ಅವರು ಹೇಳಿದ್ದು ಇಷ್ಟೇ.

ಇಬ್ಬರು ಬೆಂಗಾಳಿಗಳು ಸೇರಿದ್ರೆ ಒಂದು ಕವಿಗೋಷ್ಠಿ ನಡೆಯುತ್ತೆ.
ಇಬ್ಬರು ಮರಾಠಿಗಳು ಸೇರಿದ್ರೆ ಒಂದು ನಾಟಕ ನಡೆಯುತ್ತೆ.
ಇಬ್ಬರು ತೆಲುಗುನವರು ಸೇರಿದ್ರೆ ಒಂದು ಲೇಔಟ್ ಶುರುವಾಗುತ್ತೆ.
ಇಬ್ಬರು ಕನ್ನಡಿಗರು ಸೇರಿದ್ರೆ ೩ ರಾಜಕೀಯ ಪಕ್ಷಗಳು ಹುಟ್ಟಿ ಬಿಡ್ತಾವೆ.....

ಇದನ್ನ ಮೊದಲು ಕೇಳಿದಾಗ ನಂಗೆ ತುಂಬ ನಗು ಬಂತು. ಆದ್ರೆ ರವಿ ಬೆಳಗೆರೆ ಅವರು ತಮಾಷೆ ಮಾಡೋಕೆ ಕನ್ನಡ ಅಥವಾ ಕನ್ನಡಿಗರ ಬಗ್ಗೆ ಹೀಗೆ ಮಾತಾಡೊಲ್ಲ. ಏಕೆ ಹೀಗೆ ಹೇಳಿದ್ರು ಅಂತ ಹಾಗೆ ಯೋಚನೆ ಮಾಡ್ತಾ ಇದ್ದೆ. ಉತ್ತರ ಸಿಕ್ತು ಕಣ್ರೀ..

ದೇವೇಗೌಡರು ಮತ್ತು ರಾಮಕೃಷ್ಣ ಹೆಗ್ಡೆ ಇಬ್ರು ಅಪ್ಪಟ ಕನ್ನಡಿಗರೇ. ಇಬ್ರು ಸೇರಿ ಜನತಾ ಪಕ್ಷ (ನೇಗಿಲು ಹೊತ್ತ ರೈತ ) ಅದಿಕಾರಕ್ಕೆ ಬಂದಿದ್ದು ಎಲ್ರಿಗೂ ಗೊತ್ತು. ಆದ್ರೆ ನಂತರ ಏನಾಯ್ತು ಒಮ್ಮೆ ನೆನಪು ಮಾಡಿಕೊಂಡೆ. ಜನತಾ ಪಕ್ಷ ದಿಂದ ಜನತಾ ದಳ ಶುರುವಾಯ್ತು. ಇದರ ಜೊತೆಗೆ ಶುರುವಾದ ಮತ್ ಒಂದು ಪಕ್ಷ ಲೋಕ ಶಕ್ತಿ. ಅದ್ವಲ್ಲ ಅಲ್ಲಿಗೆ ಮೌರು ಪಕ್ಷ ...ಇಬ್ಬರು ಕನ್ನಡಿಗರಿಂದ.
ಹೀಗೆ ಇನ್ನು ಒಂದು ಉದಾಹರಣೆ ಇದೆ. ಮತ್ತೆ ನಮ್ಮ ದೇವೇಗೌಡರು , ಇವರ ಜೊತೆಗೆ ಸಿದ್ದರಾಮಯ್ಯ. ಮತ್ತೆ ಇಬ್ಬರು ಕನ್ನಡಿಗರು ಸೇರಿ ಮೂರು ರಾಜಕೀಯ ಪಕ್ಷಗಳು ಶೃಷ್ಟಿ ಆಗ್ತವೆ.

ಈ ಎರಡು ಸಂದರ್ಭದಲ್ಲಿ ನಮ್ಮ ದೇವೇಗೌಡರ ಶ್ರಮ ತುಂಬ ಇದೆ ಬಿಡಿ...ಸದ್ಯಕ್ಕೆ ಗೌಡ್ರು ಮತ್ತೊಬ್ಬ ಕನ್ನಡಿಗನನ್ನು ಹುಡುಕ್ತ ಇದಾರೆನೋ ಅನ್ನ ಸಂಶಯ ನಂಗೆ ಈಗ ಬಂದಿದೆ...ಕಾದು ನೋಡೋಣ....

ರವಿ ಬೆಳಗರೆ ಅವರು ಮಾತ್ನಲ್ಲಿ ಹೇಳಿದರೇನು ...ಗೌಡ್ರು ಒಂದಲ್ಲ ಅಂತ ಎರಡು ಬಾರಿ ಮಾಡಿ ತೋರ್ಸಿದಾರೆ...

October 27, 2008

ನಮ್ಮ ದೇಶದ ಕತೆ ಇಷ್ಟೇ ಕಣಮ್ಮೋ

ದೇಶದ ಹಲವಾರು ಪ್ರದೇಶಗಳಲ್ಲಿ ಬಾಂಬ್ಗಳು ಸ್ಪೋಟಗೊಂಡ ಸುದ್ದಿ ಎಲ್ಲಡೆ ಮಿಂಚಿನ ವೇಗದಲ್ಲಿ ಹರಡಿತ್ತು. ನಾನು ಎಲ್ಲರ ಹಾಗೆ ದೂರದರ್ಶನ, ರೇಡಿಯೋ ಹೀಗೆ ನಾಲ್ಕಾರು ಮಾದ್ಯಮಗಳ ಮೊಲಕ ಸುದ್ದಿಯ ವಿವರಗಳನ್ನು ಕೇಳುವ ಪ್ರಯತ್ನದಲಿದ್ದೆ . ಈ ಎಲ್ಲ ಪ್ರಯತ್ನಗಳ ಜೊತೆಗೆ ಸ್ನೇಹಿತರೊಂದಿಗೆ ಚರ್ಚೆ ಸಾಕಷ್ಟು ಗಂಬೀರವಗಿಯೇ ಸಾಗಿತ್ತು. ಕೆಲವೊಮ್ಮೆ ಶನಿವಾರ ಬಂತೆಂದರೆ ಯಾವ ಊರಿನಲ್ಲಿ ಬಾಂಬ್ ಸ್ಪೋಟಗೊಂಡಿದೆ, ಅಥವಾ ಎಲ್ಲಿ ಸ್ಪೋಟ ಆಗಬಹುದು ಎಂದು ಊಹಿಸುವ ಚರ್ಚೆಗಳು ನೆದೆಯುತಿದ್ದವು. ಅಷ್ಟೇ ಮುಖ್ಯವಾಗಿ ಕೇಳಿಬರುತಿದ್ದ ಮತ್ತೊಂದು ಪ್ರಶ್ನೆ ಎಂದರೆ ಈ ಎಲ್ಲ ಸ್ಪೋಟಗಳ ಹಿಂದಿರುವ ದೇಶದ್ರೋಹಿಗಳು ಯಾರು? ಹೀಗೆ ಹಲವಾರು ಚರ್ಚೆಗಳು, ಮನಸಿನ ಒಳಗಡೆ ಅವಿತಿರುವ ಭಯ, ದೂರದರ್ಶನದಲ್ಲಿ ನೋಡಿರುವ ಆ ದೃಶ್ಯಗಳು ಎಲ್ಲವೂ ಸೇರಿ ಮನಸಿನಲ್ಲಿ ಸಾಕಷ್ಟು ಗೊಂದಲಗಳನ್ನು ಹುಟ್ಟಿಸಿತು. ಇದೆಲ್ಲದರ ಮದ್ಯೆ ಒರಿಸ್ಸಾ ಹಾಗು ಕರ್ನಾಟಕದಲ್ಲಿ ಕ್ರ್ಯಸ್ತರ ಮೇಲೆ ಹಲ್ಲೆ ನಡೆಸಿದ ಸುದ್ದಿಯು ಸಾಕಷ್ಟು ಪ್ರಚಾರವಾಗಿತ್ತು. ಇಂತಹ ಸಂದರ್ಬದಲ್ಲಿ "TIMES NOW" ಸುದ್ದಿ ವಾಹಿನಿಯಲ್ಲಿ ಒಂದು ಕಾರ್ಯಕ್ರಮ ಪ್ರಸಾರಗೊಂಡಿತು. ಕಾರ್ಯಕ್ರಮದ ಉದ್ದೇಶ ತುಂಬಾ ಆಕರ್ಷಕವಾಗಿತ್ತು. ಕಾರಣವೆಂದರೆ ನಾವು ನಡೆಸುತಿದ್ದ ಚರ್ಚೆ ಮತ್ತು ಈ ಕಾರ್ಯಕ್ರಮದ ಉದ್ದೇಶ ಒಂದೇ. ಈಗ ನಮ್ಮ ಚರ್ಚೆ ಮತ್ತು ಈ ಕಾರ್ಯಕ್ರಮದ ಉದ್ದೇಶ ಹೇಳ್ತಿನಿ. ಈ ವಿಚಾರ ತುಂಬಾ ಸೂಕ್ಷ್ಮ ವಾದದ್ದು.

ಒಂದೆಡೆ ಬಾಂಬ್ಗಳ ಹಾವಳಿ, ಒಂದೆಡೆ ಕ್ರೈಸ್ತರ ಮೇಲೆ ದಾಳಿ, ಇಂತ ಸಂದರ್ಬಗಲ್ಲಿ ನಮ್ಮುಗಳ ಮನಸಲ್ಲಿ ಸಾವಿರಾರು ಪ್ರಶ್ನೆಗೆಳು ಉತ್ತರಕ್ಕಾಗಿ ಹುಡುಕಾಟ ಮಾಡುವಾಗ, ಮೆದುಳು ಮುಂಕಾಗಿ ಸೊರಗಿ ಬಿಡುತಿತ್ತು.ಈ ರೀತಿಯ ಪ್ರಶ್ನೆಗಳನ್ನು ನಾನು ಇಲ್ಲಿ ಉಲ್ಲೆಕಿಸಲೇಬೇಕು. ಎಲ್ಲ ಬಾಂಬ್ ಸ್ಪೋಟಗಳ ಹಿಂದೆ ಮುಸಲ್ಮಾನರ ಹೆಸರು ಮತ್ತೆ ಮತ್ತೆ ಏಕೆ ಕೇಳಿ ಬರುತಿದೆ? ಎಷ್ಟು ಜನ ಮುಸಲ್ಮಾನರು ಈ ದೇಶ ದ್ರೋಹಿಯ ಕೆಲಸದಲ್ಲಿ ತೊಡಗಿರುವರು? ಇವರೆಲ್ಲ ನಮ್ಮ ದೇಶದ ಪ್ರಜೆಗಳೇ? ಈ ರೀತಿಯ ಪ್ರಶ್ನೆ ಎಷ್ಟು ಸರಿ ಎಷ್ಟು ತಪ್ಪು ? ಇನ್ನು ಕ್ರೈಸ್ತರ ಮೇಲೆ ನೆಡೆದ ಹೀನಾಯ ಕೃತ್ಯಗಳಿಗೆ ಏನು ಹೇಳುವುದು ಗೊತ್ತಿಲ್ಲ. ಒಟ್ಟಾರೆಯಾಗಿ ಒಂದು ಅಂಶವನ್ನು ನಾನು ಸ್ಪಷ್ಟವಾಗಿ ಹೇಳಬಲ್ಲೆ. ನಮ್ಮ ಒಳಗಡೆ ಸಾಕಷ್ಟು ಕಿಡಿಗೇಡಿಗಳು ಬೆಳೆಯುತಿದ್ದಾರೆ. ಹೀಗೆ ಸಾಕಷ್ಟು ಪ್ರಶ್ನೆಗಳನ್ನು ಈ ಕಾರ್ಯಕ್ರಮದಲ್ಲಿ ಕೇಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹನೀಯರು

೧ .ಶ್ರೀ ಜಾವಿದ್ ಅಕ್ತರ್ (ಖ್ಯಾತ ಗೀತ ರಚನಕಾರರು )

೨. ಶ್ರೀ ಪೆರರಿಯ (ನಿವೃತ್ತ ಪೋಲಿಸ್ ಆಯುಕ್ತರು , ಹೊಸ ದೆಹಲಿ )

೩. ಶ್ರೀ ರವಿಶಂಕರ್ ಪ್ರಸಾದ್ (ಹಿರಿಯ ಮುಕಂದರು, ಭಾರತೀಯ ಜನತಾ ಪಕ್ಷ )

ನನಗೆ ಈ ಕಾರ್ಯಕ್ರಮದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಎನ್ನುವ ಹಂಬಲ. ಕಾರಣವೆಂದರೆ ಇಂದಿನ ನಮ್ಮ ಸಮಜಾದ ಆಗು ಹೋಗುಗಳು. ನಮ್ ಅಂತಹ ಸಾಮಾನ್ಯ ಜನರ ಪ್ರಶ್ನೆಗಳಿಗೆ ಈ ನಾಯಕರು ಉತ್ತರ ಕೊಡ ಬಲ್ಲರು ಎನ್ನುವ ಹಂಬಲ ಅಷ್ಟೇ. ನಾನು ಇಲ್ಲೇ ಕಾರ್ಯಕ್ರಮದಿಂದ ನನಗೆ ಏನು ತಿಳೀತು ಎಂದು ಹೇಳುವ ಪ್ರಯತ್ನ ಅಷ್ಟೇ ಮಾಡ್ತಿನಿ.

ರವಿ ಶಂಕರ್ ಪ್ರಸಾದ್ ಅವರಿಗೆ ವಿಶ್ವ ಹಿಂದು ಪರಿಷತ್ ನಡೆಸಿದ ದಾಳಿ ಅಷ್ಟೇನೂ ನೋವಲ್ಲ. ಆದರೆ ದಿಲ್ಲಿಯಲ್ಲಿ ನೆಡೆದ ಎನ್ಕೌಂಟರ್ ನಲ್ಲಿ ಮಡಿದ ಸಾಹಸಿ ಅರಕ್ಷಕನ ಸಾವು ತುಂಬಾ ನೋವುಂಟು ಮಾಡಿತ್ತು.

ಪೆರೆರಿಯ ಅವರಿಗೆ ದೇಶ ದೆಲ್ಲದೆ ನೆಡೆದ ಬಾಂಬ್ಗಳ ಹಾವಳಿ ಗಿಂತ ಹೆಚ್ಚಾಗಿ ಕ್ರೈಸ್ತರ ಮೇಲೆ ನೆಡೆದ ದಾಳಿ ತುಂಬಾ ಗೊಂದಲವನ್ನು ಅವರ ಮನಸಲ್ಲಿ ಮಾಡಿತ್ತು.

ಇನ್ನು ನಮ್ಮ ಮಹಾನ್ ಗೀತ ರಚನಕಾರರಿಗೆ ಕ್ರೈಸ್ತರ ಮೇಲೆ ನೆಡೆದ ದಾಳಿನು ಅಲ್ಲ, ಬಾಂಬ್ಗಳ ಹಾವಳಿನು ಅಲ್ಲ, ದಿಲ್ಲಿಯಲ್ಲಿ ಬಂದಿಸಿದ ಜಾಮಿಯಾ ಕಾಲೇಜಿನ ವಿದ್ಯಾರ್ಥಿಗಳು. ಇವರ ಬಂದನ ಶ್ರೀ ಅಕ್ತರ್ ಅವರಿಗೆ ಮನದಾಳದಲ್ಲಿ ನೋವುಂಟು ಮಾಡಿದೆ.

ಇವರೆಲ್ಲರೂ ಹೇಳಿದ್ದು ಇಷ್ಟೇ. "I strongly condemn the attack on christians" ಅಂತ ಒಬ್ರು ಹೇಳಿದ್ರೆ, ಇನ್ ಒಬ್ರು "VHP and ABVP should be banned" ಅಂತ ಮೊತ್ತ್ಹೊಬ್ರು ಆಮೇಲೆ ಇನ್ನೊಬ್ರು "minorities are targetted for no reason" ಅಂದ್ಬಿಟ್ರು. ನಾನು ಅವರುಗಳು ಹೇಳಿದನ್ನ ಹಾಗೆ ಇಲ್ಲಿ ಬರಿತ ಎಲ್ಲ. ಅವರುಗಳ ಮಾತಿನ ಸಾರಾಂಶವನ್ನಷ್ಟೇ ಇಲ್ಲಿ ಹೇಳುವ ಪ್ರಯತ್ನ ಮಾಡ್ತಿದೀನಿ.

ಕಾರ್ಯಕ್ರಮ ಮುಗಿತು.. ನಮ್ಮ ನಾಯಕರ ಯೋಚನಾ ದಿಕ್ಕುಗಳು ಏನು ಎಮ್ಬುದು ಮೊತ್ಹೊಮ್ಮೆ ಅರಿವು ಆಯಿತು. ಇಲ್ಲಿ ವಿಶೇಷ ಏನಂದ್ರೆ ನನ್ನ ಸ್ನೇಹಿತ ಮೊದಲೇ ಹೇಳಿದ್ದ. ಇವರೆಲ್ಲ ಕೆಲಸಕ್ಕೆ ಬಾರದವರು ಸಮಯ ವ್ಯರ್ಥ ಮಾಡಬೇಡ ಅಂತ. ಅದು ಸತ್ಯ ಅಂತ ನಂಗು ಅರಿವಾಯ್ತು. ಹಗಲಲ್ಲಿ ಕಂಡ ಬಾವಿಗೆ ಇರುಳಲ್ಲಿ ಬಿದ್ದ ಅನುಭವ.

ನಾನು ಈ ಮೊದಲು ಸಾಕಷ್ಟು ಬಾರಿ ಹೇಳ್ತಾ ಇದ್ದೆ. "ನಮಲ್ಲಿ ನಾಯಕರ ಕೊರತೆ ಇಲ್ಲ . ಒಂದು ವ್ಯವಸ್ಥೆಯ ಕೊರತೆ ಎದೆ. ನಮಗೆ ಹೊಸ ನಾಯಕರು ಬೇಡ. ಹೊಸ ವ್ಯವಸ್ಥೆಗಳು ಬೇಕು " ಅಂತ. ಅದು ತಪ್ಪು ಅಂತ ಅರಿವು ಆಯಿತು.

ಆಮೇಲೆ ನಂಗೆ ಅರಿವು ಏನು ಆಯಿತು ಅಂತ ನಿಮಗೆ ಹೇಳಲೇಬೇಕು. ಪೆರರಿಯ ಅವರಿಗೆ ಕ್ರೈಸ್ತರ ಮೇಲೆ ನೆಡೆದ ದಾಳಿ ತುಂಬಾ ನೋವುಂಟು ಮಾಡಿದೆ ಏಕೆ ಅಂದ್ರೆ ಅವರು ಕ್ರೈಸ್ತರು. ಅಕ್ತರ್ ಅವರಿಗೆ ಜಾಮಿಯಾ ವಿದ್ಯಾರ್ಥಿಗಳ ಬಂದನ ಹಾಗು ರವಿಶಂಕರ್ ಅವರಿಗೆ ದಿಲ್ಲಿ ಎನ್ಕೌಂಟರ್. ನಾನು ಇಲ್ಲಿ ಕಾರಣ ಹೇಳುವ ಅವಶ್ಯಕತೆ ಇಲ್ಲ. ಹಾಗಾಗಿ ಸಾರಾಂಶ ಏನ್ ಅಂದ್ರೆ ದೇಶ ಕಿಂತ ಜಾತಿ ಮುಖ್ಯ ಅಂತ ನಮ್ಮ ನಾಯಕರುಗಳು ಕೂಗಿ ಕೂಗಿ ಹೇಳ್ಬಿಟ್ರು.

ಸ್ನೇಹಿತರೆ ನೀವು ಕೂಡ ನಿಮ್ಮ ಅಭಿಪ್ರಾಯಗಳನ್ನ ಹೇಳಿ. ಈ ಮೌಲಕ ನನಗೆ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗಬಹುದೆಂದು ಮತೊಮ್ಮೆ ಹಂಬಲಿಸುತ್ತ .......