October 29, 2008

ಬಿಹಾರಿನ ರಾಹುಲ್ ರಾಜ್ ...

ಮೊನ್ನೆಯಷ್ಟೇ ಮುಂಬೈ ನಗರದಲ್ಲಿ ನೆಡೆದ ಎನ್ಕೌಂಟರ್ನಲ್ಲಿ ಬಿಹಾರಿನ ರಾಹುಲ್ ರಾಜ್ ಎಂಬ ಯುವಕ ಹತ್ಯೆಗೆ ಒಳಗಾದನು. ನಂತರ ನೆಡೆದ ಬೆಳವಣಿಗೆಗಳನ್ನು ನಾವು ಗಂಭಿರವಾಗಿ ಗಮನಿಸುವ ಅವಶ್ಯಕತೆ ಇದೆ ಎಂಬುದು ಇಲ್ಲಿ ನಾನು ಹೇಳಲು ಪ್ರಯತ್ನಿಸುತ್ತಿರುವ ವಿಚಾರ. ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳು, ರಾಜಕೀಯ ಮುಖಂಡರ ಹೇಳಿಕೆಗಳು, ಅದಿಕಾರಿಗಳ ಸಮರ್ತನೆ, ಇವೆಲ್ಲವನ್ನೂ ನಾವು ಕೇಳಿದ್ದೇವೆ. ಬಿಹಾರಿನ ನಾಯಕರು ಶ್ರೀ ಲಾಲು ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಅವರು ಬಿಹಾರಿನ ಕಂದನನ್ನು ಮುಂಬೈ ಪೊಲೀಸರು ಕೊಂದರು, ಅದು ಎನ್ಕೌಂಟರ್ ಅಲ್ಲ ಎಂದು ವಾದಿಸಿದರು. ಈ ಇಬ್ಬರು ನಾಯಕರು ಇದೆ ಮೊದಲ ಬಾರಿಗೆ ಒಗ್ಗಟ್ಟಾಗಿ ಬಿಟ್ಟರು. ಎಂತಹ ಆಶ್ಚರ್ಯ ನೋಡಿ. ಕೆಲವು ತಿಂಗಳ ಹಿಂದೆ ಬಿಹಾರಿನಲ್ಲಿ ನೆಡೆದ ಅತಿವೃಷ್ಟಿಯಲ್ಲಿ ಸಾವಿರಾರು ಜನಗಳು ಮನೆ, ಆಸ್ತಿ , ದನ ಕರು ಹಾಗು ತಮ್ಮೆ ಕುಟುಂಬದವರನ್ನು ಕಳೆದುಕೊಂಡರು. ಅಂತಹ ಸಂದರ್ಭದಲ್ಲಿ ಇದೆ ಇಬ್ಬರು ನಾಯಕರು ಒಬ್ಬರನೊಬ್ಬರು ದೂರಿದರು. ಆಗ ಇಬ್ಬರು ಒಂದಾಗಿ ಕೆಲಸ ಮಾಡಿದರೆ ಸಮಸ್ಯೆಯನ್ನು ಸಾಕಷ್ಟು ಚೆನ್ನಾಗಿ ನಿಬೈಸಬಹುದಿತ್ತು. ಸಾವಿರಾರು ಜನರು ಸತ್ತಾಗ ಇಲ್ಲದ ಒಗ್ಗಟ್ಟು ಈಗ ಒಬ್ಬನ ಎನ್ಕೌಂಟರ್ನಿಂದಾಗಿ ಬಂದಿದೆ ಎಂದರೆ ....ಏನೆಂದು ತಾನೆ ಹೇಳಲು ಸಾದ್ಯ. ...

ಮಾದ್ಯಮದವರು ಈ ಘಟನೆ ಯನ್ನು ಪ್ರಶ್ನಿಸಿದರು. ಬೇರೆ ದಾರಿಯೇ ಇರಲಿಲ್ಲವೇ ಅರಕ್ಷಕರಿಗೆ ? ಹೀಗೆ ಸಾಕಷ್ಟು ಪ್ರಶ್ನೆಗಳು ಕೇಳಿ ಬಂದವು. ನಾವು ನಮ್ಮ ಮಾದ್ಯಮದವರನ್ನು ಸಾಕಷ್ಟು ಬಾರಿ ತುಂಬ ಜವಾಬ್ದಾರಿ ಇಂದ ವರ್ತಿಸಿರುವುದನ್ನು ಗಮನಿಸಿರುವುದು ಸತ್ಯ. ಹಾಗಾಗಿ ಇವರು ಕೇಳುವ ಪ್ರಶ್ನೆಯಲ್ಲಿ ಸತ್ವ ಇರಬಹುದು. ಅದೇನೇ ಇರಲಿ ಅದಿಕಾರಿಗಳು ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿಯನ್ನು ಹೊತ್ತಿರುತ್ತಾರೆ.

ಇಲ್ಲಿ ಗಮನಿಸಬೇಕಾದ ಒಂದು ಅಂಶ ಎಂದರೆ ಒಬ್ಬ ಮಾಮೂಲಿ ಪ್ರಜೆಗೆ ಪಿಸ್ತೂಲು ಎಲ್ಲಿಂದ ಬಂತು. ಹಾಗೆ ಬಿಹಾರಿನಲ್ಲಿ ಪಿಸ್ತೂಲು ಹಿಡಿದು ಜನರನ್ನು ಹೆದರಿಸುವ ವರ್ತನೆ , ಅವರಿಗೆ ತಪ್ಪು ಅಂತ ಏಕೆ ಅನಿಸಲಿಲ್ಲ. ಹೀಗೆ ಇನ್ನು ಎಷ್ಟು ಜನರು ಬಿಹಾರಿನಲ್ಲಿ ಪಿಸ್ತೂಲು ಹಿಡಿದು ಈ ಮೂರ್ಖ ಕೃತ್ಯ ಎಸಗುವ ಯೋಚನೆ ನಡೆಸಿದ್ದಾರೆ? ನಾನು ಇಲ್ಲಿ ಮುಂಬೈಕರ್ ಮತ್ತು ಬಿಹಾರಿಗಳ ಮದ್ಯೆ ಇರುವ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ಅದು ನಮಗೆ ಅರ್ಥವಾಗದ ವಿಚಾರ. ಅರ್ಥವಾದರೂ ಆದಷ್ಟು ಬೇಗ ಮರೆಯಬೇಕು ಎನ್ನುವ ಬಯಕೆ.

ನಮ್ಮ ಭಯ ವೆಂದರೆ ಮುಗ್ದ ಜನರು ಇಂತಹ ಮೂರ್ಖರಿಗೆ ಬಲಿಯಾಗುವ ಸಾದ್ಯತೆ ಇದ್ದೆ ಇದೆ. ಹಾಗಾಗಿ ಈ ಪ್ರಶ್ನೆ ಕೇಳಲೇ ಬೇಕು. ಬಿಹಾರಿನವನು ಒಬ್ಬ ಸತ್ತ ಎಂಬುದು ಸತ್ಯ. ಆದರೆ ಅವನು ಮಡಿದ ಕೃತ್ಯ ಹಿಡಿ ದೇಶಕ್ಕೆ ನಾಚಿಕೆ ತರುವಂತದ್ದು. ಇವನು ಮಾಡಿದ ಕೆಲಸ ಸರಿ ಎಂದರೆ ನಾಳೆ ಒಬ್ಬ ಮುಂಬೈ ನಿಂದ ಒಂದು ಪಿಸ್ತೂಲು ಹಿಡಿದು ಪಾಟ್ನಾಗೆ ಹೋಗಿ ಲಾಲು ನನ್ನು ಕೊಲೆ ಮಾಡಲು ಬಂದೆ ಎಂದರೆ ಆಶ್ಚರ್ಯ ಏನಿಲ್ಲ ..ಅವನನ್ನು ಮುಂಬೈ ಪ್ರೇಮಿ ಇವನನ್ನು ಬಿಹಾರಿನ ಪ್ರೇಮಿ ಎಂದು ಈ ನಾಯಕರು ನಾಮಕರಣ ಮಾಡಿದರೆ ತಪ್ಪು ಆಗಲಾರದು.

ಸ್ನೇಹಿತರೇ, ಈಗಾಗಲೇ ಈ ಘಟನೆಯ ಬಗ್ಗೆ ಒಂದು ವಿಚಾರಣೆ ಸಾಗುತ್ತಿದೆ. ಎಲ್ಲ ಪ್ರಶ್ನೆ ಗಳಿಗೆ ಉತ್ತರ ಸಿಗಬಹುದು. ನಮ್ಮ ನಾಯಕರಲ್ಲಿ ನಾನು ಕೇಳುತ್ತಿರುವ ಪ್ರಶ್ನೆ ಇಷ್ಟೇ. ಒಬ್ಬ ಸಾಮಾನ್ಯ ಪ್ರಜೆಗೆ ಒಂದು ರಾಜ್ಯದ ರಾಜದಾನಿಯಲ್ಲಿ ಪಿಸ್ತೂಲು ಸಿಗುತ್ತೆ ಎಂದರೆ, ಇದು ಭಯ ಹುಟ್ಟಿಸುವ ಸುದ್ದಿ. ಇದರ ಬಗ್ಗೆ ಸಂಬಂದ ಪಟ್ಟ ಅದಿಕಾರಿಗಳು, ರಾಜಕೀಯ ನಾಯಕರು ಯೋಚಿಸಿ ಕಾರ್ಯೋನ್ಮುಖರಾದರೆ ಸಾಮನ್ಯ ಜನರ ಬಾಳು ನೆಮ್ಮದಿ ಯಾಗಿರಿವುದು...

No comments:

Post a Comment