January 30, 2009

ಬೆಟ್ಟದಲ್ಲಿ ನೆಲ್ಲಿ, ಸಮುದ್ರದ ಉಪ್ಪು

ನಾನು, ವೆಂಕ ,ಸೀನ - ಆತ್ಮೀಯ ಗೆಳೆಯರು. ಒಂದೇ ರೂಮಿನಲಿದ್ದು ಇಂಜಿನಿಯರಿಂಗ್ ಪಾಸು ಮಾಡಿದವರು. ಹುಡುಗಿಯರ ಬಗ್ಗೆ ಹಲವಾರು ಕನಸುಗಳನ್ನು ಹಂಚಿಕೊಂಡ ನಮಗೆ ಈಗ ಮದುವೆಯ ವಯಸ್ಸು.

ಮೊದಲು ಮದುವೆಯಾದವನು ವೆಂಕ. ಮದುವೆಯ ಮಂಟಪದಲ್ಲಿ ಅವನ ಹೆಂಡತಿಯನ್ನು ಪ್ರಥಮ ಬಾರಿ ನೋಡಿದಾಗ, ಸೀನ ಮತ್ತು ನನಗೆ ಅವಳು ಚೆನ್ನಾಗಿಲ್ಲ ಎನಿಸಿತು. ನನಗಂತೂ ಅವಳ ಹಲ್ಲುಗಳು ಉಬ್ಬೆನಿಸಿತು. ಸೀನ ಕೂಡ "ಹಲ್ಲೇನೋ ಪರವಾಗಿಲ್ಲ , ಆದರೆ ಸೊಂಟ ದಪ್ಪ " ಅಂತ ಮುಗೂ ಹಿಂಡಿದ. ನಾವೆಲ್ಲ ಕಂಡ ಕನಸಿನ ಕನ್ಯೆಯರಿಗೂ ಇವಳಿಗೂ ಹೋಲಿಕೆ ಇಲ್ಲವೆಂದು ಇಬ್ಬರು ನಿರ್ಧರಿಸಿದವು. ಊಟಕ್ಕೆ ಕುಳಿತಾಗ ಹಾರ - ಬಾಸಿಂಗಗಳ ಸಮೇತ ನಮ್ಮ ಬಳಿ ಬಂದ ವೆಂಕ "ಹೇಗಿದ್ದಾಳೋ " ಅಂತ ಕಳಕಳಿ ಇಂದ. ತುಂಬ ಚೆನ್ನಾಗಿದ್ದಾಳೆ ಯು ಆರ್ ಲಕ್ಕಿ ..." ಅಂತ ಇಬ್ಬರು ಒಟ್ಟಿಗೆ ಹೇಳಿದವು. "ಥ್ಯಾಂಕ್ಸ್ ಕಣ್ರೋ ...ನಾಲ್ಕೈದು ಹೀದುಗಿಯರನ್ನ ನೋಡಿದೆ . ಆದರೆ ಇವಳನ್ನ ನೋಡಿದಾ ಮೇಲೆ ಬೇರೆ ಹುಡುಗಿಯರನ್ನ ನೋಡಬೇಕು ಅಂತ ಅನ್ನಿಸಲೇ ಇಲ್ಲ " ಅಂತ ಹೆಮ್ಮೆ ಇಂದ ಹೇಳಿಕೊಂಡ. ನಾನು ಸೀನ ಮುಖ ಮುಖ ನೋಡಿಕೊಂಡೆವು.

ಮತ್ತೆ ಆರೇ ತಿಂಗಳಿಗೆ ಸೀನನ ಮದುವೆಯು ಆಯಿತು. ವಿಚಿತ್ರ ವೆಂದರೆ ಅವನ ಹೆಂಡತಿಯೂ ನನಗೆ ಚೆನ್ನಾಗಿಲ್ಲ ಅನಿಸಿತು. ಮುಗು ಸ್ವುಲ್ಪ ಡೊಂಕು! ವೆಂಕ ನಂತು "ಹೋಗಿ ಹೋಗಿ ಟೆನ್ನಿಸ್ ಕೋರ್ಟ್ ನಾ ಮದುವುಯಾಗಿದ್ದನಲ್ಲೋ ! ಎಂತ ಕಾರಬ್ ಟೇಸ್ಟ್ ಮಾರಾಯ. ಕಡೆ ಪಕ್ಷ ನನ್ನದರು ಒಂದು ಮಾತು ಕೆಳಬಹುದಿತ್ತಲ್ಲ " ಅಂತ ಪೇಚಾಡಿದ. ನಮ್ಮ ಗೊಣಗಾಟ ಏನೆ ಇದ್ದರು, ಸೀನ ಬಳಿ ಬಂದಾಗ "ಯು ಆರ್ ಲಕ್ಕಿ " ಅಂತ ಕೈ ಕುಲುಕಿದವು. ಸೀನ ನನ್ನೊಬ್ಬನನ್ನೇ ಪಕ್ಕಕ್ಕೆ ಕರೆದು "ವೆಂಕನ ತಾರಾ ಹಾರಿಬಲ್ ಆಯ್ಕೆ ನಂದಲ್ಲ ಅಲ್ವೇನೋ ? " ಅಂತ ಕೇಳಿದಾ. "ನೋ ನೋ " ಅಂತ ನಾನವನ್ನ ಒಲ್ಲದ ಮನಸ್ಸಿನಿಂದ ಸಮ್ಮತಿಸಿದೆ.

ನಾನಂತೂ ಹುಡುಗಿಯ ವಿಚಾರದಲ್ಲಿ ತುಂಬ ಜಾಗರೂಕನಾಗಿದ್ದೆ. ಉಬ್ಬು ಹಲ್ಲು, ದಪ್ಪ ಸೊಂಟ, ಮೊಂಡು ಮುಗು, ಟೆನ್ನಿಸ್ ಕೋರ್ಟು ....ಯಾವುದು ಇಲ್ಲವೆಂದು ಖಾತರಿ ಪಡಿಸಿಕೊಂಡೆ. ಆದರು ಮದುವೆಯ ದಿನ ಗೆಳೆಯರು ಏನು ಎನ್ನುವರೋ ಎಂಬ ಆತಂಕ ದಲ್ಲಿದ್ದೆ. ಪುರೋಹಿತರು, ವಿದಿಯೋದವರು , ಬಂಧು ಬಳಗದವರ ಕಣ್ಣು ತಪ್ಪಿಸಿ ಗೆಳೆಯರ ಬಳಿ ಹೋಗಿ "ಹೇಗಿದ್ದಾಳೋ ?" ಅಂತ ಉದ್ವೇಗದಲ್ಲಿ ಕೇಳಿದೆ. "ಯು ಆರ್ ಲಕ್ಕಿ ...." ಅಂತ ಇಬ್ಬರು ನನ್ನ ಕೈ ಕುಲುಕಿದರು. ನನಗೆ ನಂಬಿಕೆಯಾಗಲಿಲ್ಲ. "ಸುಳ್ಳು ಹೇಳಬೇಡ್ರೋ ...ನಿಜ ಹೇಳಿ ...ನಂಗೇನು ಬೇಜಾರಾಗೊಲ್ಲ ..." ಅಂತ ಬೇಡಿಕೊಂಡೆ. "ಸುಳ್ಳು ಯಾಕೆ ಹೇಳೋಣಾ ....ನಿಜವಾಗಿಯು ನೀನು ಲಕ್ಕಿ ...." ಅಂತ ಮೊತ್ತೊಮ್ಮೆ ನನ್ನ ಕೈ ಕುಲುಕಿ ಒಬ್ಬರಿಗೊಬ್ಬರು ಮುಖ ನೋಡಿಕೊಂಡರು !!!