October 29, 2008

ಇಬ್ಬರು ಕನ್ನಡಿಗರು ಸೇರಿದರೆ....

ಸ್ನೇಹಿತರೇ,
ಮೊನ್ನೆ ೨೮ನೇ ತಾರೀಖು ಈಟಿವಿ ಕನ್ನಡ ವಾಹಿನಿಯಲ್ಲಿ ನಮೆಲ್ಲರ ಆತ್ಮಿಯ ನಟ ದಿವಂಗತ ಶಂಕರ್ ನಾಗ್ ಅವರ ಜ್ಞಾಪಕಾರ್ಥವಾಗಿ, ರವಿ ಬೆಳಗರೆ ಅವರ ನಿರೂಪಣೆಯೊಂದಿಗೆ ಶಂಕರ್ ನಾಗ್ ಅವರು ನಟಿಸಿದ ಚಿತ್ರಗಳ ಹಾಡನ್ನು ಹಾಡುವ ಕಾರ್ಯಕ್ರಮ ಮೂಡಿ ಬಂತು. ಆ ಕಾರ್ಯಕ್ರಮದ ಹೆಸರೇ "ಎಂದು ಮರೆಯದ ಹಾಡು". ಶಂಕರ್ ನಾಗ್ ಅವರು ಅಂದ್ರೆ ನಮೆಲ್ಲರ ಜೀವನದಲ್ಲಿ ಮಿಂಚಿನ ವೇಗದಲ್ಲಿ ಬಂದು ಹೋದ ಅಪ್ರತಿಮ ಕನ್ನಡದ ಕಲಾವಿದ. ಹಾಗಾಗಿ ಕಾರ್ಯಕ್ರಮ ನೋಡಲೇಬೇಕು ಎಂದು ತಿರ್ಮಾನಿಸಿ ನೋಡಲು ಕುಳಿತೆ. ಜೊತೆಗೆ ರವಿ ಬೆಳಗೆರೆ ಅವರ ನಿರೂಪಣೆ ಅಂದ್ರೆ ಅದರ ಮಜಾನೆ ಬೇರೆ ಬಿಡಿ. ಹೀಗೆ ರವಿ ಬೆಳೆಗರೇ ಅವರು ನಿರೂಪಣೆ ಮಾಡ್ತಾ ಒಂದು ಮಾತು ಹೇಳಿದ್ರು ಕಣ್ರೀ.. ಅದನ್ನ ಕೇಳಿದ ಮೇಲೆ ಅದ್ರಲ್ಲಿ ಎಷ್ಟು ಸತ್ಯ ಇದೆ ಅಂತ ನಾನು ಒಮ್ಮೆ ಯೋಚನೆ ಮಾಡಿದೆ. ಹಾಗಂತ ಅವರೇನು ಅಷ್ಟು ಗಂಬೀರವದ ವಿಚಾರವನ್ನ ಹೇಳಲಿಲ್ಲ. ಅದನ್ನು ಕೇಳ್ದಾಗ ನಂಗು ತುಂಬ ನಗು ಬಂತು. ಅವರು ಹೇಳಿದ್ದು ಇಷ್ಟೇ.

ಇಬ್ಬರು ಬೆಂಗಾಳಿಗಳು ಸೇರಿದ್ರೆ ಒಂದು ಕವಿಗೋಷ್ಠಿ ನಡೆಯುತ್ತೆ.
ಇಬ್ಬರು ಮರಾಠಿಗಳು ಸೇರಿದ್ರೆ ಒಂದು ನಾಟಕ ನಡೆಯುತ್ತೆ.
ಇಬ್ಬರು ತೆಲುಗುನವರು ಸೇರಿದ್ರೆ ಒಂದು ಲೇಔಟ್ ಶುರುವಾಗುತ್ತೆ.
ಇಬ್ಬರು ಕನ್ನಡಿಗರು ಸೇರಿದ್ರೆ ೩ ರಾಜಕೀಯ ಪಕ್ಷಗಳು ಹುಟ್ಟಿ ಬಿಡ್ತಾವೆ.....

ಇದನ್ನ ಮೊದಲು ಕೇಳಿದಾಗ ನಂಗೆ ತುಂಬ ನಗು ಬಂತು. ಆದ್ರೆ ರವಿ ಬೆಳಗೆರೆ ಅವರು ತಮಾಷೆ ಮಾಡೋಕೆ ಕನ್ನಡ ಅಥವಾ ಕನ್ನಡಿಗರ ಬಗ್ಗೆ ಹೀಗೆ ಮಾತಾಡೊಲ್ಲ. ಏಕೆ ಹೀಗೆ ಹೇಳಿದ್ರು ಅಂತ ಹಾಗೆ ಯೋಚನೆ ಮಾಡ್ತಾ ಇದ್ದೆ. ಉತ್ತರ ಸಿಕ್ತು ಕಣ್ರೀ..

ದೇವೇಗೌಡರು ಮತ್ತು ರಾಮಕೃಷ್ಣ ಹೆಗ್ಡೆ ಇಬ್ರು ಅಪ್ಪಟ ಕನ್ನಡಿಗರೇ. ಇಬ್ರು ಸೇರಿ ಜನತಾ ಪಕ್ಷ (ನೇಗಿಲು ಹೊತ್ತ ರೈತ ) ಅದಿಕಾರಕ್ಕೆ ಬಂದಿದ್ದು ಎಲ್ರಿಗೂ ಗೊತ್ತು. ಆದ್ರೆ ನಂತರ ಏನಾಯ್ತು ಒಮ್ಮೆ ನೆನಪು ಮಾಡಿಕೊಂಡೆ. ಜನತಾ ಪಕ್ಷ ದಿಂದ ಜನತಾ ದಳ ಶುರುವಾಯ್ತು. ಇದರ ಜೊತೆಗೆ ಶುರುವಾದ ಮತ್ ಒಂದು ಪಕ್ಷ ಲೋಕ ಶಕ್ತಿ. ಅದ್ವಲ್ಲ ಅಲ್ಲಿಗೆ ಮೌರು ಪಕ್ಷ ...ಇಬ್ಬರು ಕನ್ನಡಿಗರಿಂದ.
ಹೀಗೆ ಇನ್ನು ಒಂದು ಉದಾಹರಣೆ ಇದೆ. ಮತ್ತೆ ನಮ್ಮ ದೇವೇಗೌಡರು , ಇವರ ಜೊತೆಗೆ ಸಿದ್ದರಾಮಯ್ಯ. ಮತ್ತೆ ಇಬ್ಬರು ಕನ್ನಡಿಗರು ಸೇರಿ ಮೂರು ರಾಜಕೀಯ ಪಕ್ಷಗಳು ಶೃಷ್ಟಿ ಆಗ್ತವೆ.

ಈ ಎರಡು ಸಂದರ್ಭದಲ್ಲಿ ನಮ್ಮ ದೇವೇಗೌಡರ ಶ್ರಮ ತುಂಬ ಇದೆ ಬಿಡಿ...ಸದ್ಯಕ್ಕೆ ಗೌಡ್ರು ಮತ್ತೊಬ್ಬ ಕನ್ನಡಿಗನನ್ನು ಹುಡುಕ್ತ ಇದಾರೆನೋ ಅನ್ನ ಸಂಶಯ ನಂಗೆ ಈಗ ಬಂದಿದೆ...ಕಾದು ನೋಡೋಣ....

ರವಿ ಬೆಳಗರೆ ಅವರು ಮಾತ್ನಲ್ಲಿ ಹೇಳಿದರೇನು ...ಗೌಡ್ರು ಒಂದಲ್ಲ ಅಂತ ಎರಡು ಬಾರಿ ಮಾಡಿ ತೋರ್ಸಿದಾರೆ...

2 comments: