October 31, 2008

ಕುಡುಕನ ಮಾಸ್ಟರ್ ಸ್ಟ್ರೋಕ್...

ಸಾಮನ್ಯವಾಗಿ ಜನಗಳು ಎಣ್ಣೆ ಹಾಕಿ ಫುಲ್ಲು ಟೈಟಾದ ಮೇಲೆ ಏನ್ ಮಾಡ್ತಾರೆ ಅಂದ್ರೆ . ಯಾವ ಪೋಸಿಶನ್ ನಲ್ಲಿ ಎಲ್ಲಿ ಕೂತ್ಕೊಂಡ್ ಕುಡಿತ ಇರ್ತಾರೆ ಅಲ್ಲೇ ಪ್ಲಾಟ್ ಆಗ್ತಾರೆ. ಇನೊಂದ್ ಸ್ವಲ್ಪ ಜನ ನಾನೇ ರಾಜ ಅನ್ಕೊಂಡು ಯಾರು ಕೇಳಲಿ ಬಿಡಲಿ ಮಾತಿನ ಸಾಗರವನ್ನೇ ಹರಿದು ಬಿಡುತ್ತಾರೆ. ಮತ್ತೆ ಸ್ವಲ್ಪ ಜನ ಫುಲ್ಲು ಬಾವುಕರಾಗಿ ಅತ್ತಿಬಿಡ್ತಾರೆ. ಮತ್ತೊಂದ್ ಅಷ್ಟು ಜನ ಕರಾಟೆ ಆಡಿ ಪೋಲಿಸ್ ಸ್ಟೇಷನ್ಗೆ ಹೋದ್ರೆ, ಕೆಲವರು ಆಸ್ಪತ್ರೆಗೆ ಹೋಗ್ತಾರೆ. ಇದೆಲ್ಲ ಬಿಟ್ಟು ಕೆಲವರು ಇದ್ದರೆ ಅವ್ರು ಟೈಟೆ ಆಗೋಲ್ಲ. ಇದೆಲ್ಲ ಬಿಟ್ಟು ಅವ್ನು ಬೇರೆ ಏನಾದ್ರು ಮಾಡ್ತಾನೆ ಅಂದ್ರೆ ಅವನು ಮಾಸ್ಟರ್ ಪೀಸ್ ಆಗ್ತಾನೆ. ಈ ತರಹದ ಒಂದು ಮಾಸ್ಟರ್ ಪೀಸ್ ಬಗ್ಗೆ ನಾನು ಸಾಕಷ್ಟು ಹುಡುಕ್ತ ಇದ್ದೆ. ಹಿಂದೆ ಎಂದಾದರೂ ನೋಡಿರ ಬಹುದೇ ಎಂದು ನನ್ನ ಹಳೆ ನೆನಪುಗಳನ್ನ ಮೆಲುಕು ಮಾಡಿದೆ.

ಒಂದು ಘಟನೆ ನೆನಪಾಯಿತು. ರಾತ್ರಿ ಹುಡುಗ ಒಂದು ಫುಲ್ಲು ಬಾಟಲ್ ವಿಸ್ಕಿ ಯನ್ನು ಒಬ್ಬನೇ ಕೂತು, ಎದುರುಗಡೆ ಕೂತಿರುವನಿಗೆ ಮೊಳೆ ಹೊಡಿತ, ಬಾಟಲ್ ಅನ್ನು ಕಾಲಿ ಮಾಡಿ ಮಲಗಿಬಿಟ್ಟ. ಎದುರುಗಡೆ ಕೂತಿದ್ನಲ್ಲ ಅವನ ಪರಿಸ್ತಿತಿ ಏನಗಿರಬಹುದು ಒಮ್ಮೆ ನೀವು ಯೋಚನೆ ಮಾಡಿ. ಏಕೆ ಅಂದ್ರೆ ಅಂದು ಮಲಗಿದಾಗ ಸುಮಾರು ಬೆಳಗಿನ ಜಾವ ೪ ಘಂಟೆ. ಆ ಲೆವೆಲ್ನಲ್ಲಿ ಕುಡಿತಾನೆಅಂದ್ರೆ ಬೆಳಿಗ್ಗೆ ರಜೆ ಇದೆ ಅಂತಾನೆ ಅರ್ತ ಬಿಡಿ. ಅಂತು ಇಂತೂ ೪ ಘಂಟೆಗೆ ಮಲಗಿಬಿಟ್ರು. ಅರೆ ಇದೇನು ಮುಖ್ಯವಾಗಿ ಹೇಳಬೇಕಗಿರೋದನ್ನೇ ಹೇಳಲಿಲ್ಲ ಅಂತ ಯೋಚನೆ ಮಾಡ್ತಾ ಇದಿರಾ. ಸತ್ಯ ಏನು ಅಂದ್ರೆ ರಾತ್ರಿ ಆ ತರಹ ಏನು ಆಗ್ಲಿಲ್ಲ.

ಕುಡಿದವನಿಗೆ ಕಿಕ್ ಹೊಡದಿದ್ದು ಬೆಳಿಗ್ಗೆ ಎದ್ದ ಮೇಲೆ. ಬೆಳಿಗ್ಗೆ ಎದ್ದಾಗ ಸುಮಾರು ೧೧ ಘಂಟೆ. ಕಷ್ಟ ಪಟ್ಟು ಎದ್ದ ಹುಡುಗ. ಬಲಗಡೆ ಬುಜದಲ್ಲಿ ಒಂದು ಗಾಯ ಆಗಿದೆ. ಹುಡುಗ ಯೋಚನೆ ಮಾಡಿದ. ರಾತ್ರಿ ಏನ್ ಆಯಿತು ಅಂತ ಒಮ್ಮೆ ಯೋಚಿಸಿದ. ನೆನಪು ಆಯಿತು. ತಾನು ಎದುರುಗಡೆ ಕೂತವನಿಗೆ ತುಂಬ ಕೊರಿತ ಇದ್ದೆ. ಅವ್ನು ಕೂಡ ಉರಕೊಂತ ಇದ್ದ. ಅಲ್ಲಿಗೆ ಹುಡುಗ ತೀರ್ಮಾನಕ್ಕೆ ಬಂದ. ನಿಮಗೂ ಅರ್ಥ ಆಯ್ತಲ್ಲಾ ...ಕಾರಣ ಯಾರಿರಬಹುದು ಅಂತ?

ಸಿಟ್ಟು ಬಂತು ಹುಡುಗನಿಗೆ. ಅವನನ್ನ ಕರೆದು ಕೂಗಾಡಿದ. ಮಗನೆ ರಾತ್ರಿ ನಾನು ಟೈಟಾಗಿದ್ದಾಗ ನನನ್ನ ಬೀಳಿಸಿ ಗಾಯ ಮಾಡಿ ಇದ್ದೀಯ. ಸುಮ್ನೆ ಇರೋಲ್ಲ ನಾನು. ಎದುರ್ಗಡೆ ಇದ್ದವನಿಗೆ ಮತ್ತೆ ಉರ್ದೊಯ್ತು. ಅವನು ಹೇಳ್ದ, ಮಗನೆ ರಾತ್ರೆಲ್ಲ ನಿದ್ದೆ ಹಾಳ್ಮಾಡಿದ್ದೂ ಅಲ್ಲದೆ ಈಗ ನಂಗೆ ಉಗಿತ ಇದ್ದೀಯ ...ಕುಡ್ದು ಮಗನೆ ಬಚ್ಚಲು ಮನೇಲಿ ಬಿದ್ದೆ. ಜೋರು ಸೌಂಡ್ ಆಯಿತು. ಏನಪ ಅಂತ ನಾನು ಬರೋದ್ರಲ್ಲಿ ನೀನೆ ಎದ್ದು ಬರ್ತಾ ಇದ್ದೆ. ಏಳ್ತಾ ಇದಾನಲ್ಲ ಅಂತ ನಾನು ಓಪಸ್ ಬರ್ತಾ ಇದ್ದೆ ಮತ್ತೆ ಸೌಂಡ್ ಆಯಿತು...ಅದೇ ತಾರಾ ಸುಮಾರ್ ಸರಿ ಸೌಂಡ್ ಕೆಳುಸ್ತು...ಅಂತು ಮತ್ತೆ ಬಂದು ನನ್ನ ತಲೆ ತಿಂತಾ ಕುಡಿದೆ..ಈಗ ನನ್ ಮೇಲೆ ಆರೋಪ ಮಾಡ್ತಾ ಇದ್ದೀಯ. ಕಡಿಮೆ ಕುಡಿಯೋಕೆ ಆಗೋಲ್ವಾ...

ಅದ್ರು ನಮ್ಮ ಮಾಸ್ಟರ್ ಪಿಎಸೆಗೆ ಇವನ ಮೇಲೆ ನಂಬಿಕೆ ಇರ್ಲಿಲ್ಲ...ಆಮೇಲೆ ದಿನ ಕಳೆದ ಹಾಗೆ ಕೈ, ಕಾಲು ಹಾಗೆ ನೋವೋಕ್ಕೆ ಶುರು ಅದ್ವಂತೆ...ಸಾಯಂಕಾಲ ಮತ್ತೆ ಕ್ವಾರ್ಟರ್ ಹೊಡಿಬೇಕಾದ್ರೆ ಹೇಳೋದಂತೆ. ಮಗ ನೀನು ಬೆಳಿಗ್ಗೆ ಹೇಳಿದ್ದು ಸತ್ಯ ಅಂತ......

ಹೆಂಗೆ ನಮ್ಮ ಮಾಸ್ಟರ್ ಪೀಸ್ ?


1 comment:

  1. ಕುಡಿದ ನಶೆಯಲ್ಲಿ, ನಡೆದದ್ದು ಮರೆತಾಗ, ಮರಳಿ ನಶೆ ತಂದು ನೆನಪಿಸಿಕೋ ಎಂದ ಸಂದೀಪ...

    ReplyDelete